ಗೋಟೂರ್: ಜೈ ಜವಾನ ಜೈ ಕಿಸಾನ್ ಘೋಷಣೆ ಅರ್ಥಪೂರ್ಣ
ಕಾಳಗಿ,ಆ ೧೭ : ತಾಲೂಕಿನ ಗೋಟೂರ್ ಗ್ರಾಮದಲ್ಲಿ ೧೫ಆಗಸ್ಟ್ ರಂದು ನಡೆದ ಸ್ವಾತಂತ್ರ ದಿನದಂದು ಜೈ ಜವಾನ ಜೈ ಕಿಸಾನ್, ಎಂಬ ಪದಕ್ಕೆ ಅರ್ಥ ಪೂರ್ಣವಾಗಿ ಮಾಡಿ ಕೀರ್ತಿಗೆ ಭಾಜನರಾದ ಗೊಟೂರ್ ಗ್ರಾಮಸ್ಥರು.
ಈ ಗ್ರಾಮದಲ್ಲಿ ಪ್ರತಿ ೪ ಜನರಲ್ಲಿ ಒಬ್ಬರು ದೇಶದ ಯಾವುದಾದರು ಒಂದು ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವೇ ಈ ಮಕ್ಕಳ ವಿದ್ಯಾಭ್ಯಾಸ ಮನೆಯ ಜವಾಬ್ದಾರಿ ಇದರಲ್ಲಿಯೇ ಸಮಯ ಇಲ್ಲದ ಜನ ಇಂಥದರಲ್ಲಿ ತನ್ನ ಮನೆಯ ಜವಾಬ್ದಾರಿ ಜೊತೆ ಜೊತೆಗೆ ಹಳ್ಳಿಗೆ ಒಂದು ಏನಾದರು ವಿಶೇಷವಾದ ಕಾರ್ಯಕ್ರಮ ಮಾಡುತ್ತ ಸ್ವಾತಂತ್ರ ದಿನಾಚರಣೆಯು ಬರೆ ಹೆಸರಿಗೆ ಮಾಡದೇ ಒಂದು ಅರ್ಥಪೂರ್ಣವಾಗಿ ಮಾಡಿ ಹಳ್ಳಿಯ ಕೀರ್ತಿಗೆ ಭಾಜನರಾದ ವಿಶ್ವನಾಥ ರೆಡ್ಡಿ ಕಾಮರೆಡ್ಡಿ.
ಸ್ವಾತಂತ್ರ ದಿನಾಚರಣೆ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕ್ರಷಿಯನ್ನೆ ಮೂಲ ಕಸುಬನ್ನಾಗಿಸಿಕೊಂಡ ಊರಿನ ೧೨ಜನ ರೈತರನ್ನು,ಇಬ್ಬರು ಮಾಜಿ ಸೈನಿಕರನ್ನು,ನಮ್ಮೂರ ಶಾಲೆಯಲ್ಲೆ ಕಲಿತ ಹತ್ತನೇ ತರಗತಿಯಲ್ಲಿ ೬೦% ತೆಗೆದು ಕೊಂಡ ಪ್ರತಿಭಾವಂತ ೧೩ ಜನ ವಿಧ್ಯಾರ್ಥಿಗಳನ್ನು ,ಹಾಗು ಇದೇ ವರುಷ ಪೋಲಿಸ್ ಇಲಾಖೆಗೆ ಆಯ್ಕೆಯಾದ ಇಬ್ಬರು ಹಳೆ ವಿದ್ಯಾರ್ಥಿಗಳನ್ನು ಮತ್ತು ಇದೇ ವರುಷ ಶಿಕ್ಷಕ ವ್ರತ್ತಿ ಯಿಂದ ನಿವೃತ್ತರಾದ ಹಳೆ ವಿದ್ಯಾರ್ಥಿ ಶರಣಬಸಪ್ಪ ಪೋ ಪಾಟೀಲ್ ಅವರನ್ನೂ ಒಳಗೊಂಡAತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಿದ ವಿಧ್ಯಾರ್ಥಿ ವಿದ್ಯಾರ್ಥಿನಿ ಯರಿಗೆ ಮತ್ತು ಹೊಸದಾಗಿ ಆರಂಭಿಸಿದ ಐಏಉ Uಏಉ ಎಲ್‌ಕೆಜಿ ಯು ಕೆಜಿ ಶಿಕ್ಷಕಿಯರಿಗೆ ಹಾಗು ಆಯಮ್ಮಳಿಗೂ ಎಲ್ಲರನ್ನೂ ಶಾಲು ಹೂವಿನ ಹಾರ ಜೊತೆಗೆ ಒಂದು ಪುಸ್ತಕ ಕೊಡುವ ಮುಖಾಂತರ ಊರಿನ ಹಿರಿಯರಿಂದ ಸನ್ಮಾನಿಸಲಾಯಿತು. ವಿಶೇಷವಾಗಿ ರೈತರಿಗೆ ಹಸಿರು ಟವೆಲ್ ಹೂವಿನ ಹಾರ ಬಾರುಕೋಲು ಕೊಡುವುದು ಮುಖಾಂತರ ಗೌರವ ಸಲ್ಲಿಸಲಾಯಿತು. ಶಾಲೆಯ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳನ್ನು ತುಂಬಾ ಅಚ್ಚುಕಟ್ಟಾಗಿ ಶಿಸ್ತು ಸಂಯಮದಿAದ ಕಾರ್ಯಕ್ರಮಗಳನ್ನು ಏರ್ಪಡಿಸಿ ಗ್ರಾಮಸ್ತರಿಂದ ಮೆಚ್ಚುಗೆ ಪಡೆದರು.
ಅದರಲ್ಲೂ ವಿಶೇಷವಾಗಿ ವಿಧ್ಯಾರ್ಥಿಗಳಿಂದ ಅಣುಕು ಸಂಸತ್ತು ತುಂಬಾ ಚೆನ್ನಾಗಿ ಮಾಡಿದರು. ಈ ಸಂಧರ್ಭದಲ್ಲಿ ಊರಿನ ಹಿರಿಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಯುವಕರು ಉಪಸ್ಥಿತರಿದ್ದರು.