ಕಲಬುರಗಿ ರಂಗಾಯಣದ ನೂತನ ನಿರ್ದೇಶಕಿಯಾಗಿಡಾ. ಸುಜಾತಾ ಜಂಗಮಶೆಟ್ಟಿ ಅಧಿಕಾರ ಸ್ವೀಕಾರ
ಕಲಬುರಗಿ,ಆ.೧೭- ಕಲಬುರಗಿ ರಂಗಾಯಣದ ನೂತನ ನಿರ್ದೇಶಕಿಯಾಗಿ ಡಾ. ಸುಜಾತಾ ಜಂಗಮಶೆಟ್ಟಿ ಅವರು ಶುಕ್ರವಾರ ಪದಗ್ರಹಣ ಮಾಡಿದರು. ರಂಗಾಯಣದ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಅವರು ಹೂಗುಚ್ಚ ನೀಡಿ ನೂತನ ನಿರ್ದೇಶಕಿಗೆ ಶುಭ ಕೋರಿದರು. ಕಚೇರಿ ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು