ವಿಕರವೇಯಿಂದ ಸ್ವಾತಂತ್ರ್ಯ ದಿನಾಚರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೭; ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 78 ನೇ  ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕೆಬಿ ಬಡಾವಣೆಯಲ್ಲಿರುವ ಕಚೇರಿ ಮುಂಭಾಗದಲ್ಲಿ ನೆರವೇರಿತು.ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ್ ಬಡದಾಳ್ ಧ್ವಜಾರೋಹಣ ನೆರವೇರಿಸಿದರು.ವೇದಿಕೆ ಜಿಲ್ಲಾಧ್ಯಕ್ಷರಾದ ಬಾಬುರಾವ್, ಪ್ರಧಾನ ಕಾರ್ಯದರ್ಶಿ ಅಮ್ಜದ್ ಆಲಿ, ನಗರಾಧ್ಯಕ್ಷರಾದ ಚಂದ್ರಶೇಖರ್ ಗಣಪಾ, ಗಿರೀಶ್, ವಿಶ್ವನಾಥ ಕುಲಕರ್ಣಿ, ಅಲೋಕ್ ಕೆ ವೈ ಮುಂತಾದವರು ಇದ್ದರು.