ಸ್ವಾತಂತ್ರö್ಯ ದಿನಾಚರಣೆಯಂದು ನೋಟ್ ಬುಕ್ ವಿತರಣೆ
ಜೇವರ್ಗಿ ೧೫ : ೭೮ನೇ ಸ್ವಾತಂತ್ರ‍್ಯ ದಿನಾಚರಣೆಯ ನಿಮಿತ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜನಿವಾರ ವಿದ್ಯಾರ್ಥಿಗಳಿಗೆ ಜೇವರ್ಗಿ ತಾಲೂಕು ವಿದ್ಯುತ್ ಕಾರ್ಮಿಕರ ಸೇವಾ ಸಂಘ ಹಾಗೂ ಮಳಿಗೆಗಳ ಮಾಲೀಕರ ಸಹಯೋಗದೊಂದಿಗೆ ಇಂದು ನೋಟ್ ಬುಕ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಲಾಯಿತು.
ಶಾಲೆಯ ಮುಖ್ಯ ಗುರುಗಳಾದ ಮಾಪಣ್ಣ ಕುಸುಮನಕರ್ ಮಾತನಾಡಿ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದವರು ಎಂಬ ಕೀಳಿರಿಮೆಯಿದೆ, ಅದನ್ನು ಮೊದಲು ಮನಸ್ಸಿನಿಂದ ಕಿತ್ತೊಗೆದು, ಛಲದಿಂದ ವ್ಯಾಸಂಗ ಮಾಡಿ, ಹೆಚ್ಚಿನ ಅಂಕ ಗಳಿಸುವ ಮೂಲಕ ತಾವು ಯಾರಿಗಿಂತಲೂ ಕಡಿಮೆ ಇಲ್ಲ ನಿಮ್ಮೊಂದಿಗೆ ನಾವಿದ್ದೀವಿ ಎಂದು ನಿಮ್ಮನ್ನು ಪ್ರೋತ್ಸಾಹಿಸಿದಂತ ಜೇವರ್ಗಿ ತಾಲೂಕು ವಿದ್ಯುತ್ ಕಾರ್ಮಿಕರ ಸೇವಾ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೊರೆ ಮಾತನಾಡಿ, ಒಂದುವರ್ಷದಲ್ಲಿ ಮೂರ್ನಾಲ್ಕು ಬಾರಿ ಒಂದೊAದು ಗ್ರಾಮದ ಸರಕಾರಿ ಶಾಲೆಗಳಿಗೆ ಪೆನ್ನು ನೋಟ್ ಪುಸ್ತಕ ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಪರಿಕರಗಳು ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರ ಮಲ್ಲಯ್ಯ ಸ್ವಾಮಿ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಹನುಮಂತ್ರಾಯ, ಸಂಘದ ಗೌರವಾಧ್ಯಕ್ಷ ಅಬ್ದುಲ್ ಸಮದ್, ಶಂಕರ್ ಬಾವಿಕಟ್ಟಿ, ನಾಗರಾಜ ದೊರೆ, ಬಾಬು ಇನಾಮಾದಾರ್, ತಿಮ್ಮಯ್ಯ ಚೌದ್ರಿ, ಸಿದ್ದು ಗುಡೂರ್, ಸಿದ್ದಣ್ಣ, ವಿಶ್ವನಾಥ್ ಗೌನಳ್ಳಿ, ವಿನೋದ, ದೇವು ಪೂಜಾರ, ರಮೇಶ ಬುಕ್ಕಾನ್ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು