ವೀರ ಹೋರಾಟಗಾರರ ಪ್ರತಿಫಲವೇ ಈ ದೇಶದ ಸ್ವಾತಂತ್ರö್ಯ : ಡಾ. ಅಜಯಸಿಂಗ್
ಜೇವರ್ಗಿ: ವೀರ ಹೋರಾಟಗಾರರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಹಗಲಿರುಳೆನ್ನದೆ ಹೋರಾಡಿದ ಪ್ರತಿಫಲವೇ ಈ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕೆದೆ ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್ ಅಭಿಮತಪಟ್ಟರು.
ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದ ವತಿಯಿಂದ ೭೮ ಸ್ವಾತಂತ್ರೊö್ಯÃತ್ಸವ ದಿನಾಚರಣೆಯನ್ನು ಅದ್ದುರಿಯಾಗಿ ಆಚರಿಸಲಾಯಿತು.
ದ್ವಾಜಾರೋಹಣ ನೆರವೆರಿಸಿ ಶಾಸಕ ಡಾ. ಅಜಯಸಿಂಗ್ ಮಾತನಾಡಿದ ದೇಶದ ಮೇಲೆ ಇರುವ ಪ್ರೇಮ ಅಭಿಮಾನ ಎಂದು ಕಡಿಮೆ ಆಗಬಾರದು. ದೇಶದ ಪ್ರಗತಿ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಶ್ರಮಿಸಬೇಕು. ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಸಮಸ್ಯೆ ಇಲ್ಲಿವರೆಗೆ ಬಗೆಹರಿಯಬೇಕಿತ್ತು ಆದರೆ ೨೦೧೮-೨೦ರಲ್ಲಿ ಮುಗಿಯುವ ಕಾರ್ಯ ಸರ್ಕಾರ ಬದಲಾವಣೆ ಆದಕಾರಣ ಕುಂಠಿತವಾಗಿತ್ತು, ಈ ಕಾಮಗಾರಿ ೨ ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುತ್ತದೆ.
ಕೆ.ಕೆ.ಆರ್.ಡಿ.ಬಿ ವತಿಯಿಂದ ಹಲವಾರು ಯೋಜನೆಗಳು ಹಮ್ಮಿಕೊಂಡು ಪ್ರತಿ ಒಂದು ಹಳ್ಳಿಗಳಿಗೂ ಸಿ.ಸಿ ರಸ್ತೆ, ಅರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸೇರಿ ಹಲವಾರು ಯೋಜನೆಗಳು ಪ್ರತಿಯೊಂದು ಹಳ್ಳಿಗಳಿಗೂ ಸಿಗಬೇಕು ಅನ್ನುವ ಪ್ರತಿಷ್ಠೆಯಲ್ಲಿ ನಮ್ಮ ಎಲ್ಲಾ ಅಧಿಕಾರಿಗಳು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ವಿಶೇಷವಾಗಿ ಗಣನೀಯ ತಾಲೂಕಿನ ಏಳಿಗೆಗೆ ಶ್ರಮಿಸಿದ ಪತ್ರಕರ್ತರಿಗೆ, ತಾಲ್ಲೂಕಿನ ವಿವಿಧ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಜನಸಾಮಾನ್ಯರ ಮೆಚ್ಚಿಗೆಗೆ ಪಾತ್ರರಾದ ನೌಕರರಿಗೆ ಸನ್ಮಾನಿಸಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕ್ಷೇತ್ರ ಕೀರ್ತಿ ಬೆಳಗಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಲ್ಯಾಪ್ ಟಾಪ ವಿತರಿಸಿದರು. ಜೇಸ್ಕಾಂ ಇಲಾಖೆಯಿಂದ ವಿದ್ಯುತ್ ಅವಗಡಕ್ಕೆ ಬಲಿಯಾದ ಕುಟುಂಬದ ಸದಸ್ಯರಿಗೆ ೫ ಲಕ್ಷ ಪರಿಹಾರವನ್ನು ನೀಡಲಾಯಿತು. ಇದರ ಜೊತೆಗೆ ಡಿ ಎಮ್. ಎಫ್ ಅನುದಾನದಲ್ಲಿ ಕ್ಷೇತ್ರದ ಅಂಗವಿಕಲರಿಗೆ ಸ್ಕೂಟರ್ ವಿತರಣೆ ಮಾಡಿಲಾಯಿತು. ತಾಲೂಕ್ ಆಡಳಿತ ವತಿಯಿಂದ ವಿವಿಧ ಇಲಾಖೆಯ ನೌಕರರಿಗೆ ವಾಲಿಬಾಲ್ ಮತ್ತು ಕ್ರಿಕೆಟ್ ಆಟಗಳನ ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು. ತಾಲ್ಲೂಕಿನ ವಿವಿಧ ಶಾಲೆಗಳು ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಮನರಂಜನೆ ಜೊತೆ ದೇಶದ ಅಭಿಮಾನ ಮೂಡಿಸಿದ ಶಾಲೆಗೆ ಬಹುಮಾನ ನೀಡಿಲಾಯಿತು. ಒಟ್ಟಾರೆ ೭೮ನೆ ಸ್ವಾತಂತ್ರ‍್ಯ ದಿನಾಚರಣೆಯನ್ನು ಬಹು ವಿಜೃಂಭಣೆಯಿAದ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಹಳ್ಳೆಪ್ಪಚಾರ್ಯ ಜೋಶಿ ಕಾಸರ ಬೋಸಗಾ, ಗುಡುಲಾಲ ಶೇಖ, ರಾಜಾಸಾಬ್ ನದಾಫ್, ಡಾ. ಗಿರೀಶ ರಾಠೋಡ, ಗುರುಶಾಂತಪ್ಪ ಚಿಂಚೋಳಿ, ಸಿದ್ದು ಪಾಟೀಲ್, ವೀರಣ್ಣ ಬೊಮ್ಮನಹಳ್ಳಿ, ಗಜಾನಂದ ಬಿರೇದಾರ್, ಸಿದ್ದಣ್ಣ ಹುಲಿಕಲ್, ಪುಟನಾಯಕ್, ಬಸವರಾಜ ಹಾದಿಮಾನಿ, ಶಂಭುಲಿAಗ ದೇಸಾಯಿ, ಮೋನಮ್ಮ ಸುತ್ತಾರ್, ಶೋಭಾ ಸಜ್ಜನ, ಮಹಾದೇವಿ ಶಿವಪುಂಜ, ಸುಮಂಗಲ, ತಾಲೂಕು ಕ್ರೀಡಾಂಗಣ ವ್ಯವಸ್ಥಾಪಕ ಸಂಗಮೇಶ ಕೊಂಬಿನ್, ಸಂತೋಷ ಸಂಗಮ, ಲಕ್ಷಿö್ಮÃಕಾಂತ ಸಾಸನೂರ, ರವಿ, ಸಾಯಬಣ್ಣ ಕಲ್ಯಾಣಕರ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ರವಿಚಂದ್ರ ಗುತ್ತೇದಾರ್, ಮರಪ್ಪ ಸರಡಗಿ, ಚಂದ್ರಶೇಖರ್ ನೇರಡಗಿ, ರಾಜಶೇಖರ್ ಮುತ್ತಕೋಡ, ದೇವಿಂದ್ರ ಬಡಿಗೇರ, ವಿಶ್ವ ಆಲೂರ, ಆಕಾಶ ಡುಗನಕರ್ ಸೇರಿ ದಂತೆ ತಾಲೂಕ ಮಟ್ಟದ ಅಧಿಕಾರಿಗಳು, ಮುಖಂಡರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದರು.