ಸಂಭ್ರಮದ ೭೮ ನೇ ಸ್ವಾತಂತ್ರ‍್ಯ ದಿನಾಚರಣೆ
ಅಫಜಲಪುರ.ಆ.೧೭: ಪಟ್ಟಣದ ನ್ಯಾಯಾಲಯದ ಸಂಕಿರಣದಲ್ಲಿ ಹಮ್ಮಿಕೊಂಡ ೭೮ ನೇ ಸ್ವಾತಂತ್ರ‍್ಯೋತ್ಸವ ರಾಷ್ಟ್ರ ಧ್ವಜಾರೋಹಣವನ್ನು ಹಿರಿಯ ಸಿವಿಲ್ ನ್ಯಾಯಧೀಶರಾದ ಗೌರವಾನ್ವಿತ ವಿನಾಯಕ ಮಾಯಣನವರು ನೆರವೇರಿಸಿದರು.
ಈ ವೇಳೆ ಕಿರಿಯ ನ್ಯಾಯಾಧೀಶರಾದ ಗೌರವಾನ್ವಿತ ಅನಿಲ ಅಮಟೆ, ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಎಸ್. ಎಸ್ ಪಾಟೀಲ ಅವರು ಸೇರಿದಂತೆ ಸಂಘದ ಸರ್ವ ಸದಸ್ಯರು, ಪದಾಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ ವರ್ಗ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.