ಭಾವೈಕ್ಯತೆ ಸಾರಿದ ಆಟೋ ಚಾಲಕರ ಸಂಘ
ಅಫಜಲಪುರ.ಆ.೧೭: ೭೮ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆಯ ಅಂಗವಾಗಿ ಭಾವೈಕ್ಯತೆಯ ಸಂದೇಶ ಹಾಗೂ ರಾಷ್ಟ್ರ ಪ್ರೇಮ ಸಾರಲು ತಾಲೂಕು ಆಟೋ ಚಾಲಕರ ಸಂಘದ ವತಿಯಿಂದ ವಿನೂತನವಾಗಿ ಹಮ್ಮಿಕೊಂಡ ಆಟೋ ರ್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು.
ನಂತರ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರಿಗೆ ಆಟೋ ಚಾಲಕರ ಸಂಘದ ವತಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಸೈಫನ್ ಸಾಬ್ ಹಿತ್ತಲ ಶಿರೂರ, ಉಪಾಧ್ಯಕ್ಷ ಶಿವಾನಂದ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ, ಕಾರ್ಯದರ್ಶಿ ಖಾಜಪ್ಪ, ಖಜಾಂಚಿ ಸುಭಾಷ, ಸದಸ್ಯರುಗಳಾದ ಪ್ರೇಮ್, ಮಹಿಬೂಬ್, ಮಶಾಕ್ ಖುರೇಶಿ, ಮುಸ್ತಾಕ್ ಪಟೇಲ್, ಸಚಿನ್, ಗೌತಮ್ ಸೇರಿದಂತೆ ಅನೇಕ ಚಾಲಕರು ಭಾಗವಹಿಸಿದ್ದರು.