ಅದ್ದೂರಿಯಾಗಿ ಜರುಗಿದ ರಾಯಣ್ಣ ಮೆರವಣಿಗೆ
ಚಿತ್ತಾಪುರ.ಆ೧೭:- ಅಗಸ್ಟ್ ೧೫ನೇ ತಾರಿಕು ಗುರುವಾರದಂದು ಸಂಗೊಳ್ಳಿ ರಾಯಣ್ಣನವರ ೧೧ಅಡಿ ಎತ್ತರದ ಭವ್ಯ ಪ್ರತಿಮೆಯ ಮೆರವಣಿಗೆಯೂ ಸಹಸ್ರಾರು ಭಕ್ತರ ಮದ್ಯದಲ್ಲಿ ಅದ್ದೂರಿಯಾಗಿ ಜರುಗಿತು.
ಪಟ್ಟಣದ ಕನಕ ಭವನದಿಂದ ಸಾಯಂಕಾಲ ಐದುಗಂಟೆಯಿAದ ಪ್ರಾರಂಭವಾದ ರಾಯಣ್ಣ ಪ್ರತಿಮೆಯ ಅದ್ದೂರಿ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಾದ ಲಾಡ್ಜಿಂಗ್ ಕ್ರಾಸ್, ತಹಶೀಲ್ದಾರ್ ಕಚೇರಿ, ರೈಲ್ವೆ ನಿಲ್ದಾಣ ರಸ್ತೆ ನಾಗಾವಿ ವೃತ್ತ,ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ,ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ವರೆಗೆ ಮೆರವಣಿಗೆ ನಡೆಯಿತು.
ಮೆರವಣಿಗೆ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಕುರುಬ ಸಮಾಜದ ಬಾಂಧವರು ಭಾಗವಹಿಸಿ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ಪ್ರತಿಮೆಯ ಮೆರವಣಿಗೆ ಕಾರ್ಯಕ್ರಮಕ್ಕೆ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು,ಚಾಲನೆ ನೀಡಿದರು ಈ ಸಂದರ್ಭದಲ್ಲಿ ಖ್ಯಾತ ಉದ್ದಿಮೆದಾರರಾದ ನಾಗರೆಡ್ಡಿ ಪಾಟೀಲ್ ಕರದಾಳ್,ಯಲ್ಲಾಲಿಂಗ್ ಬೆಂಕಿ,ಕುರುಬ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ಹೊಸಳ್ಳಿ,ಸಿಪಿಐ ಚಂದ್ರಶೇಖರ ತಿಗಡಿ, ಪಿಎ??? ಶ್ರೀಶೈಲ ಅಂಬಾಟಿ,ಕ್ರಾAತಿ ವೀರ ಸಂಗೊಳ್ಳಿ ರಾಯಣ್ಣ ಪಡೆಯ ತಾಲೂಕ ಅಧ್ಯಕ್ಷ ಭೋಜು ಶೇರಿ,ಕುರುಬ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ್ ಪೂಜಾರಿ,ಬಸವರಾಜ ಪೂಜಾರಿ ಮೋಘಲಾ, ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ,ಬೀರಲಿಂಗ್ ಪೂಜಾರಿ, ನಾಗೇಶ್ ಪೂಜಾರಿ,ಸಿದ್ದು ಪೂಜಾರಿ,ಶಂಕರ್ ಪೂಜಾರಿ,ಬಸವರಾಜ ಟಿ ಪೂಜಾರಿ,ಸಿದ್ದು ಪೂಜಾರಿ ವಾಡಿ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಅನೇಕರು ಇದ್ದರು.