ಸ್ವಾತಂತ್ರö್ಯ ದಿನಾಚರಣೆ: ಮಕ್ಕಳಿಂದ ವಿವಿಧ ಸಾಮೂಹಿಕ ಸ್ಪರ್ಧೆಗಳು
ಕಲಬುರಗಿ: ನಗರದ ರೇವಣಸಿದ್ದೇಶ್ವರ ಕಾಲೋನಿಯಲ್ಲಿರುವ ಶ್ರೀದಾಮೋಧರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್. ಶಾಲೆಯಲ್ಲಿ ೭೮ನೇ ಸ್ವಾತಂತ್ರö್ಯ ದಿನಾಚರಣೆ ಆಚರಿಸುವದರ ಜೊತೆಗೆ ಶಾಲೆಯ ನಾಲ್ಕು ಗ್ರಹದ (ಹೌಸ್) ಮಕ್ಕಳಿಂದ ವಿವಿಧ ಸಾಮೂಹಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಕ್ರೀಕೆಟ್ ಆಟಗಾರ ಅಭಿಷೆಕ ರೆಡ್ಡಿ, ನಿರ್ಣಾಯಕರಾಗಿ ಡಾ. ವಿಶ್ವರಾಜ ಪಾಟೀಲ, ಸೌಖ್ಯ ಕುಲಕರ್ಣಿ, ಸಂಸ್ಥೆಯ ಕಾರ್ಯದರ್ಶಿ ಮೀರಾ ರಘೋಜಿ, ಸಂಸ್ಥೆಯ ಸಂಚಾಲಕಿ ನಂದಿನಿ ಆರ್ ರಘೋಜಿ, ಟ್ರಸ್ಟಿ ವಿಷ್ಣು ಕೇಲೋಜಿ, ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಿಣ್ಣಿ, ಶಾಲೆಯ ಪ್ರಾಂಶುಪಾಲ ಪ್ರಮೋದ ಎಸ್ ಮಳೇಕರ, ಶಾಲೆಯ ವಿದ್ಯಾರ್ಥಿಗಳಾದ ಲಿಂಗರಾಜ ಭೋಜಪ್ಪ, ಸಲೋನಿ ಜೈಪ್ರಕಾಶ, ಕು. ಸಂಸ್ಕೃತಿ ಭೀಮರಾವ ಸೇರಿದಂತೆ ಶಾಲೆಯ ಸಮಸ್ತ ಸಿಬ್ಬಂದಿ ವರ್ಗ, ಆಡಳಿತ ಮಂಡಳಿ, ಹಾಗೂ ಪಾಲಕರು ಉಪಸ್ಥಿತರಿದ್ದರು. ನಂತರ ಈ ವಿವಿಧ ಸಾಮೂಹಿಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ. ವಿಜೇತರಾದಂತಹ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.