ಇಂದಿನ‌‌ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೊರಾಟದ ಸ್ಮರಣೆ ಅಗತ್ಯ:- ಶಾಸಕ ಬಿ.ದೇವೇಂದ್ರಪ್ಪ
ಸಂಜೆವಾಣಿ ವಾರ್ತೆ
ಜಗಳೂರು.ಆ.೧೬:- ಮೊಬೈಲ್ ಗೀಳಿನಲ್ಲಿರುವ ಇಂದಿನ ಯುವಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಸ್ಮರಣೆ ಅಗತ್ಯವಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ‌ ಆಚರಣಾ ಸಮಿತಿಯಿಂದ ಹಮ್ಮಿ ಕೊಂಡಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬ್ರಿಟೀಷರ ದಾಸ್ಯ ಸಂಕೋಲೆಯಿಂದ ಮುಕ್ತಿಗಾಗಿ ಜಲಿ ಯನ್ ವಾಲ್ ವಾಗ್ ಹತ್ಯಾಕಂಡ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಮನ ಗಾಣಬೇಕಿದೆ.ಇಂದಿನ ಯುವಪೀಳಿಗೆಗೆ ದೇಶಪ್ರೇಮ, ಸಂಸ್ಕಾರಯುತ ಶಿಕ್ಷಣಕೊಡಿಸುವಲ್ಲಿ ಪೋಷಕರು,ಶಿಕ್ಷಕ ರು ಮುಂದಾಗಬೇಕು ಎಂದು ಸಲಹೆ ನೀಡಿದರು.ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ದ ಹೋರಾಟದ ಮಾದರಿಯಲ್ಲಿ ಪ್ರಸಕ್ತವಾಗಿ ದೇಶದೊಳಗಿನ ಬಂಡವಾಳ ಶಾಹಿಗಳ ಪರವಾಗಿರುವವರ ವಿರುದ್ದ ಹೊರಾಟ ಅನಿ ವಾರ್ಯತೆಯಿದೆ. ದೇಶದಲ್ಲಿನ ಸಂವಿಧಾನ ವಿರೋಧಿ ಗಳು ದೇಶದ ನೈಜ ಇತಿಹಾಸ ತಿರುಚುತ್ತಿರುವುದು ಆತಂಕ ಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.ಬಹುತ್ವದಲ್ಲಿ ಏಕತೆ ಸಾರುವ ದೇಶದಲ್ಲಿ ಧರ್ಮಾತೀತ, ಜಾತ್ಯಾತೀತವಾಗಿ ಸರ್ವರಿಗೂ ನೆಲೆ ನೀಡಿರುವ ಭಾರತಾಂಭೆಯ ವಿಚಾರದಲ್ಲಿ ದೇಶಾಭಿಮಾನದ ಐಕ್ಯತೆಯ ಕೀರ್ತಿ‌ಪತಾಕಿ ಹಾರಿಸಬೇಕಿದೆ ಎಂದರು. ಸಿರಿಗೆರೆ‌ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು.30ಕ್ಕೂ ಅಧಿಕ‌ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.ಶೀಘ್ರದಲ್ಲಿ ಎಲ್ಲಾ ಕೆರೆಗಳಿಗೂ ನೀರು ಭರ್ತಿಯಾಗಲಿದೆ.ಅಂತೆಯೇ ಬಹುದಿನದ ಕನಸಿನ ಯೋಜನೆ ಭದ್ರಾಮೇಲ್ದಂಡೆ ಯೋಜನೆ ಸಾಕಾರಗೊಂಡಿದೆ.ತುಂಗಾಭದ್ರಾ ನದಿಯಿಂದ‌ ತಾಲೂಕಿಗೆ ಹರಿದು ಬರಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ‌ಗೆ ಇಂದು ನೂತನ‌ಸಂಸದೆ‌ ಡಾ.ಪ್ರಭಾಮಲ್ಲಿಕಾರ್ಜುನ್ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಭವಿಷ್ಯದ ನೀರಾವರಿ ನಾಡಿನ ಮುನ್ಸೂಚನೆಗಾಗಿ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳ,ಕೆರೆ ಕಟ್ಟೆಗಳು,ಮೈದುಂಬಿ ಹರಿಯುತ್ತಿರುವುದೇ ಸಾಕ್ಷಿಯಾಗಿವೆ.ರೈತರಿಗೆ ಅಲ್ಪ ಪ್ರಮಾಣದ ಹಾನಿಯಾಗಿರಬಹುದು.ಆದರೆ ಮಳೆಯಾಗುತ್ತಿರುವುದನ್ನು ಹರ್ಷಪಡಬೇಕಿದೆ‌ ಎಂದು ವಿಶ್ವಾಸವ್ಯಕ್ತಪಡಿಸಿದರು.