ನಾಳೆ ಆರ್ಯ ಈಡಿಗರ ಸಂಘದಿಂದ ವಿದ್ಯಾರ್ಥಿ ನಿಲಯ ಉದ್ಘಾಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೬; ದಾವಣಗೆರೆ ಜಿಲ್ಲಾ ಆರ್ಯ ಈಡಿಗರ ಸಂಘದ ನೇತೃತ್ವದಲ್ಲಿ ಆ.೧೮ ರಂದು‌ ಬೆಳಗ್ಗೆ ೧೦.೩೦ ಕ್ಕೆ  ಇಲ್ಲಿನ ವಿನೋಬನಗರದಲ್ಲಿ‌  ಸಂಘದಿಂದ ನೂತನವಾಗಿ ನಿರ್ಮಿಸಿರುವ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಎ.ನಾಗರಾಜ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಆ.೧೮ ರಂದು ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸೋಲೂರು ಶ್ರೀ ನಾರಾಯಣಗುರು ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಗರ್ತಿಕೆರೆಯ ಶ್ರೀ ರೇಣುಕಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ಸಂಘದ ಅಧ್ಯಕ್ಷರಾದ ಹೆಚ್.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆಂದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಆಗಮಿಸಲಿದ್ದಾರೆ.ಇದೇ ವೇಳೆ ಸಂಘದ ಕಚೇರಿಯ ಉದ್ಘಾಟನೆಯನ್ನು ಬೆಂಗಳೂರು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡರು ನೆರವೇರಿಸಲಿದ್ದಾರೆ.ಜೆ.ಸಿ ಫೌಂಡೇಶನ್ ಅಧ್ಯಕ್ಷ ಜೆ.ಪಿ ಸುಧಾಕರ್ ಭೋಜನಾಲಯ ಉದ್ಘಾಟಿಸಲಿದ್ದಾರೆ.ಅತಿಥಿಗಳಾಗಿ ಮಾಜಿ ಸಚಿವ ಎಸ್.ಎ ರವೀಂದ್ರನಾಥ್,ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ,ಚಿತ್ರದುರ್ಗ ಅಧ್ಯಕ್ಷ ಹೆಚ್.ಜೀವನ್ ಆಗಮಿಸಲಿದ್ದಾರೆಂದರು.ಸುದ್ದಿಗೋಷ್ಟಿಯಲ್ಲಿ ದಾವಣಗೆರೆ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹೆಚ್.ಶಂಕರ್, ಖಜಾಂಚಿ ಈ.ದೇವೇಂದ್ರಪ್ಪ, ಎಸ್. ಭರಮಪ್ಪ, ಟಿ.ಜೆ.ಜಯಪ್ರಕಾಶ್, ಎಸ್.ವಿ.ರಾಮದಾಸ್, ಬಿ.ಸೋಮಶೇಖರ್, ಈ.ಪದ್ಮನಾಭ, ಎಸ್.ಮಂಜಪ್ಪ, ಎಂ.ಅಂಜಿನಪ್ಪ ಇತರರು ಇದ್ದರು.