ಬಸವ ಜಯಮೃತ್ಯುಂಜಯ ಸ್ವಾಮೀಜಿ ತೇಜೋವಧೆ ಯತ್ನ ಖಂಡಿಸಿ ಪಂಚಸೇನೆ ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೭: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ತೇಜೋವಧೆ ಮಾಡಿ ಪ್ರಾಣ ಬೆದರಿಕೆ ಒಡ್ಡುತ್ತಿರುವ ದುಷ್ಕರ್ಮಿಗಳನ್ನು ಸರ್ಕಾರ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪಂಚಸೇನೆ ಜಿಲಾ ್ಲಘಟಕ ಮತ್ತು ನಗರ ಘಟಕ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಂಚಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಗಂಗಶೆಟ್ಟಿ ಮಾತನಾಡಿ, ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹಗಲಿರುರುಳು ೨ ಎ ಮೀಸಲಾತಿಗಾಗಿ ಶ್ರಮಿಸುತ್ತಿರುವ ಪೂಜ್ಯರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಅವರ ಬೆಳವಣಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳ ಗುಂಪು ಮೇಲಿಂದ ಮೇಲೆ ತೇಜೋವಧೆಗೆ ಹವಣಿಸುತ್ತಿರುವುದು ಸ್ವಾಮೀಜಿ ಅವರ ಭಕ್ತರ ಮನಸ್ಸಿಗೆ ತುಂಬಾ ನೋವಾಗಿದೆ. ಕಾರಣ ಈ ಕೂಡಲೇ ಇಂಥ ದುಷ್ಕೃತ್ಯವನ್ನು ಕೈ ಬಿಡಬೇಕೆಂದರು. ಇಲ್ಲದಿದ್ದರೆ ಅವರಿಗೆ ಸ್ವಾಮೀಜಿ ಅವರ ಭಕ್ತರೇ ಸರಿಯಾದ ಬುದ್ದಿ ಕಲಿಸಲು ಮುಂದಾಗುತ್ತಾರೆ ಎಂದು ಎಚ್ಚರಿಸಿದರು.
ಪಂಚಸೇನೆ ಜಿಲ್ಲಾ ಕಾರ್ಯದರ್ಶಿ ಡಾ. ಸಂಜು ಶೀಳಿನ ಮಾತನಾಡಿ, ಮೊಬೈಲ್, ಫೇಸ್ಬುಕ್, ವಾಟ್ಸಪ್‌ಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡುವವರು ನಿಜವಾಗಲೂ ಹೇಡಿಗಳು. ಎದುರು ನಿಂತು ಎದುರಿಸಲಾಗದ ದುಷ್ಕರ್ಮಿಗಳು ಬೆನ್ನ ಹಿಂದೆ ನಿಂತು ಇಂಥಹ ಕೃತ್ಯ ಎಸಗುತ್ತಾರೆ. ಆದರೆ ನಮ್ಮ ಸ್ವಾಮೀಜಿ ಅವರ ಜೊತೆ ಅಪಾರ ಭಕ್ತವೃಂದವಿದೆ. ಈ ಹಿಂದೆ ಅನೇಕರು ಸ್ವಾಮೀಜಿಯವರ ತೇಜೋವಧೆಗೆ ಕೈಹಾಕಿ ಜೈಲು ಪಾಲಾಗಿದ್ದಾರೆ. ಒಳ್ಳೆಯವರಿಗೆ ವೈರಿಗಳು ಜಾಸ್ತಿ. ಅಂಥಹ ವೈರಿಗಳು ಇನ್ನಾದರೂ ಪಾಠ ಕಲಿಯಲಿ. ಬಸವಾದಿ ಶರಣರು ಅವರಿಗೆ ಒಳ್ಳೆಯ ಸದ್ಭುದ್ಧಿ ಕರುಣಿಸಲಿ ಎಂದರು.
ಪAಚಸೇನೆ ನಗರ ಘಟಕದ ಅಧ್ಯಕ್ಷ ಸಂತೋಷ ಮುಂಜಣ್ಣಿ ಮಾತನಾಡಿ, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರಗಳಾದ ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮೀಜಿಯವರು ಸಮಾಜದ ಉದ್ಧಾರಕ್ಕಾಗಿ ಜನತೆಯ ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ಅಭಿವೃದ್ಧಿ ಸಾಧಿಸುವುದಕ್ಕಾಗಿ ಅಖಂಡ ಕರ್ನಾಟಕ ಸಂಚರಿಸಿ ಚದುರಿ ಹೋದ ಸಮಾಜವನ್ನು ಒಗ್ಗೂಡಿಸಿ ರಾಜ್ಯಾದ್ಯಂತ ಕಾನೂನಾತ್ಮಕವಾಗಿ ಹೋರಾಟವನ್ನು ಮಾಡಿರುತ್ತಾರೆ. ಸರ್ಕಾರಗಳು ಕೂಡ ಅವರ ಭಾವನೆಗಳಿಗೆ ಧಕ್ಕೆ ಬರುವಂತೆ ಪಂಚಮಸಾಲಿ ಜನತೆಗೆ ಮೋಸವನ್ನುಂಟು ಮಾಡಿದೆ. ಅಂತಹದರಲ್ಲಿ ನಮ್ಮ ಸಮಾಜದ ಜಗದ್ಗುರುಗಳಿಗೆ ಅವರ ಆತ್ಮಸ್ಥೆöÊರ್ಯವನ್ನು ಕುಗ್ಗಿಸಿ ಹೋರಾಟದ ದಿಕ್ಕನ್ನು ಬದಲಿಸಲು ಶತ ಪ್ರಯತ್ನಗಳು ನಡೆಯುತ್ತಿವೆ. ಆದರೆ ನಾವು ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನಮಗೆ ೨ ಎ ಮೀಸಲಾತಿ ದೊರೆಯುವವರೆಗೆ ವಿರಮಿಸುವುದಿಲ್ಲ. ನಮ್ಮ ಗುರುಗಳನ್ನು ನಿಂಧಿಸಿದವರಿಗೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ. ಸರ್ಕಾರ ಕೂಡಲೇ ನಮ್ಮ ಗುರುಗಳ ತೇಜೋವಧೆ ಮಾಡುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಶ್ರೀಶೈಲ ಮುಳಜಿ, ದಾನೇಶ ಅವಟಿ, ಶೋಭಾ ಬಿರಾದಾರ, ಈರಣ್ಣ ಕಲಬುರ್ಗಿ ಮಾತನಾಡಿದರು.
ಸಾಹೇಬಗೌಡ ಲಚ್ಯಾಣ, ಮಹಾಂತಗೌಡ ಪಾಟೀಲ, ನಾಡಗೌಡ ಶಿಗ್ಗಾಂವಿ, ಗುರುರಾಜ ಚಾಳಿಕಾರ, ಚಂದ್ರಶೇಖರ ಮುಂಜಣ್ಣಿ, ಬಾಗೇಶ ತಡಲಗಿ, ಶಿವು ಕೊಪ್ಪದ, ಪವಾಡೆಪ್ಪ ಹುಲಿ, ಪ್ರಶಾಂತಗೌಡ ಪಾಟೀಲ, ಹೂವಪ್ಪಗೌಡ ಬಿರಾದಾರ, ಕಾರ್ತಿಕ ಮುಂಜಣಿ, ಸಂಜು ಶೀಳಿನ, ಗಂಗೂಬಾಯಿ ಮಠದಾನ ಇನ್ನು ಅನೇಕರು ಉಪಸ್ಥಿತರಿದ್ದರು.