ಶ್ರೀ ಕರಿಬಸವೇಶ್ವರ ಅಜ್ಜಯ್ಯನವರ ಪುಣ್ಯಾರಾಧನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.17; ಹಳೇಕುಂದವಾಡದ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಆ.೧೭ ರ ಶನಿವಾರದಿಂದ ಆ.೧೯ ರವರೆಗೆ ಲೋಕಕಲ್ಯಾಣರ್ಥವಾಗಿ ರುದ್ರ ಹೋಮ, ಮೃತ್ಯುಂಜಯ, ಪ್ರತ್ಯಾಂಗಿರ,ಸುದರ್ಶನ ನಾರಾಯಣ ಜಪ- ಹೋಮ- ಹವನ ಹಮ್ಮಿಕೊಳ್ಳಲಾಗಿದೆ ನಂತರ ಮಧ್ಯಾಹ್ನ ೧ ಕ್ಕೆ ಪೂರ್ಣಾಹುತಿ ನಡೆಯಲಿದೆ ಹಾಗೂ ಆ.೧೯ ರಂದು ಶ್ರೀ ಕರಿಬಸವೇಶ್ವರ ಅಜ್ಜಯ್ಯನವರ ಪುಣ್ಯಾರಾಧನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಧರ್ಮಾಧಿಕಾರಿ ಜೆ.ರಾಜಣ್ಣ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಶಾಮನೂರು ಶಿವಶಂಕರಪ್ಪ,ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್,ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್,ಶಾಸಕರುಗಳಾದ ಕೆ.ಬಸವಂತಪ್ಪ,ಶಿವಗಂಗಾ ಬಸವರಾಜ್ ಆಗಮಿಸಲಿದ್ದಾರೆ.ಬಿಐಇಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಬಿ ಅರವಿಂದ್ ಉಪಸ್ಥಿತರಿವವರು.ಜಿಲ್ಲಾಧಿಕಾರಿ ಗಂಗಾಧರಸ್ವಾಮಿ,ಎಸ್ಪಿ ಉಮಾ ಪ್ರಶಾಂತ್,ಅಪರ ಜಿಲ್ಲಾಧಿಕಾರಿ ಪಿ.ಎಸ್ ಲೋಕೇಶ್,ಅಪರ ಎಸ್ಪಿ ವಿಜಯಕುಮಾರ್,ಮೇಯರ್ ವಿನಾಯಕ ಪೈಲ್ವಾನ್,ಪಾಲಿಕೆ ಆಯುಕ್ತರಾದ ರೇಣುಕಾ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆಂದರು.ಸುದ್ದಿಗೋಷ್ಠಿಯಲ್ಲಿ ರವೀಂದ್ರನಾಥ್,ಎಸ್.ವಿ ಜಿನದತ್ತ, ಶಿವಮೂರ್ತಿ,ಕರಿಬಸಪ್ಪ ಸೇರಿದಂತೆ ಅನೇಕರಿದ್ದರು.