ಆ.೧೮ ಕ್ಕೆ ಬಂಜಾರ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೬:ಜಿಲ್ಲಾ ಬಂಜಾರ ಸೇವಾ ಸಂಘದಿಂದ ಇದೇ ಆ.೧೮ ರಂದು ನಗರದ ಕುಂದುವಾಡ ರಸ್ತೆಯ ಬಂಜಾರ ಭವನದಲ್ಲಿ ೨೦೨೩-೨೪ ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ನಂಜಾನಾಯ್ಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೧ ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸೇವಾಲಾಲ್, ಅಂಬೇಡ್ಕರ್, ನಾಲ್ವಡಿ ಕೃಷ್ಣ ರಾಜೇಂದ್ರ ವಡೆಯರ ಭಾವಚಿತ್ರಗಳಿಗೆ ಎಸ್.ಎಸ್.ಮಲ್ಲಿಕಾರ್ಜುನ್, ಪಿ.ಟಿ.ಪರಮೇಶ್ವರ್ ನಾಯ್ಕ ಹಾಗೂ ಬಿ.ಟಿ.ಲಲೊತಾ ನಾಯ್ಕ ಪುಪ್ಪಾರ್ಚನೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜೆ.ಶಾಂತನಗೌಡ, ಬಿ.ಪಿ.ಹರೀಶ್, ಬಿ.ದೇವೇಂದ್ರಪ್ಪ, ಕೆ.ಎಸ್.ಬಸವಂತಪ್ಪ, ಬಸವರಾಜ್ ಶಿವಗಂಗಾ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದರು.ಶೇಕಡ ೮೫ ರಷ್ಟು ಅಂಕ ಪಡೆದ ೪೦ ಎಸ್.ಎಸ್.ಎಲ್.ಸಿ ಹಾಗೂ ೫೩ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಜೊತೆ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಗಣ್ಯರಾದ ಎನ್.ಜಯದೇವ ನಾಯ್ಕ, ಕಾಂತಾ ನಾಯ್ಕ, ದಿನೇಶ್ ಕೆ.ಶೆಟ್ಟಿ, ರಮೇಶ್ ಬಾಣೋತ್ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಟಿಯಲ್ಲಿ ಲಕ್ಷ್ಮಣ್ ನಾಯ್ಕ, ಲಕ್ಷ್ಮಣ ರಮಾವತ್, ರವಿನಾಯ್ಕ, ಕುಬೇರ ನಾಯ್ಕ, ಗೋಪಿನಾಯ್ಕ, ದೀಪಕ್,  ರಮೇಶ್ ಇತರರು ಇದ್ದರು.