ಮುಕಾರ್ತಿಹಾಳ: ಮಾತೋಶ್ರೀ ಶಂಕುತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ೭೮ನೇ ಸ್ವಾತಂತ್ರೊö್ಯÃತ್ಸವ
ಸAಜೆವಾಣಿ ವಾರ್ತೆ,
ವಿಜಯಪುರ,ಆ.೧೭:ಸ್ವಾತಂತ್ರö್ಯಕ್ಕಾಗಿ ಹಲವಾರು ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅಂತವರನ್ನು ಸ್ಮರಿಸಬೇಕು ಮತ್ತು ಅವರ ತತ್ವ ಸಿದ್ದಾಂತಗಳನ್ನು ನಾವೆಲ್ಲ ಪಾಲಿಸಬೇಕೆಂದು ಕೃಷಿ ಮಹಾ ವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ೭೮ನೇ ಸ್ವಾತಂತ್ರೊö್ಯÃತ್ಸವದ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇಂದಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ದೇಶದಲ್ಲಿ ವಿವಿಧ ರಂಗಗಳಲ್ಲಿ ಅನೇಕ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಇಂದು ಜಗತ್ತಿನ ಜನಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕನುಗುಣವಾಗಿ ಆಹಾರ ಉತ್ಪಾದನೆ ದ್ವಿಗುಣಗೊಳಿಸುವ ಜವಾಬ್ದಾರಿ ಕೃಷಿ ವಿಜ್ಞಾನಿಗಳ ಮೇಲಿದೆ. ದೇಶ ಕಾಯುವ ಸೈನಿಕ, ದೇಶಕ್ಕೆ ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ನೆನೆಯಬೇಕಾಗಿದೆ. ಶಾಲೆಯ ಬಾಲಕರು ಈಗಿನಿಂದಲೆ ದೇಶಾಭಿಮಾನ, ಸ್ವಚ್ಛತೆಯ ಬಗ್ಗೆ ಅರಿವು, ಆರೋಗ್ಯದ ಬಗ್ಗೆ ಕಾಳಜಿ ಹೊಂದಬೇಕಾಗಿದೆ ಎಂದರು.
ವಿಲಾಸ ನಾಯಕ ಮಾತನಾಡಿ, ಮೊದಲು ಬ್ರಿಟಿಷರು ವ್ಯಾಪಾರ ಮಾಡುವ ಉದ್ದೇಶದಿಂದ ನಮ್ಮ ದೇಶಕ್ಕೆ ಬಂದು ಸಂಪತ್ತನ್ನು ಲೂಟಿ ಮಾಡಿದರು. ನಂತರ ನಡೆದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಬ್ರಿಟಿಷರನ್ನು ಹೊಡೆದೋಡಿಸಲು ಹಮ್ಮಿಕೊಂಡ ಚಳವಳಿಗಳನ್ನು ವಿವರಿಸಿದರು.
ಸ್ವಾತಂತ್ರೊö್ಯÃತ್ಸ÷್ವದ ನಂತರ ಮಕ್ಕಳಿಂದ ಭಾಷಣ, ದೇಶ ಭಕ್ತಿಗೀತೆ, ನೃತ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕುಸುಮಾವತಿ ದಶವಂತ, ವಿಜಯಕುಮಾರ ಸಿ, ಮುಖ್ಯ ಗುರುಮಾತೆ ಚೈತ್ರಾ ಗುಳೇದಗುಡ್ಡ, ಶಿಕ್ಷಕಿಯರಾದ ವಿದ್ಯಾ ನರಸರಡ್ಡಿ, ಕೀರ್ತಿ ಚಿಮ್ಮಲಗಿ, ಅಕ್ಷತಾ ಮಾಳಗೊಂಡ, ಪ್ರತಿಭಾ ಚಲವಾದಿ, ಪಾಲಕರಾದ ದಿಲೀಪ ಲಮಾಣಿ, ಸುರೇಶ ಲಮಾಣಿ, ರವಿ ಲಮಾಣಿ, ಕಾಂತು ಲಮಾಣಿ ಸೇರಿದಂತೆ ಸುತ್ತಲಿನ ಗ್ರಾಮದ ಪಾಲಕರು, ಶಾಲಾ ಮಕ್ಕಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.