ಕುಂದು ಕೊರತೆ ಆಲಿಸಲು ನೂತನ ಕಚೇರಿ
ಆನೇಕಲ್.ಆ.೧೭:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಕೊರತೆಯಿಂದ ಸರ್ಕಾರದ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜನರ ಕೈ-ಸೇರುತ್ತಿಲ್ಲ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ವಿಭಾಗದ ಪ್ರದಾನ ಕಾರ್ಯದರ್ಶಿ ಸರ್ಜಾಪುರ ರಮೇಶ್ ರವರು ತಿಳಿಸಿದರು.
ಅವರು ಸೋಂಪುರ ಗೇಟ್ ಬಳಿಯಲ್ಲಿ ಸರ್ಜಾಪುರ ಡಾ|| ಮಂಜು ಸರ್ಜಾ ಹಾಗೂ ಶ್ರೀನಿವಾಸ್ ರೆಡ್ಡಿ ರವರ ಮಾಲೀಕತ್ವದಲ್ಲಿ ನೂತನವಾಗಿ ಪ್ರಾರಂಭಗೊಂಡ ಎಂ.ಎನ್.ಪಿ ಎಂಟರ್ ಪ್ರೈಸಸ್ ಕಚೇರಿಗೆ ಚಾಲನೆ ನೀಡಿ ಮಾತನಾಡಿದರು. ಕಟ್ಟ ಕಡೆಯ ಮನುಷ್ಯನಿಗೂ ಸರ್ಕಾರ ಯೋಜನೆಗಳು ತಲುಪಿ ಆರ್ಥಿಕವಾಗಿ ಸಬಲರಾಗಬೇಕು ಎಂಬುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು. ಅದಿಕಾರಿಗಳ ನಿರ್ಲಕ್ಷತನದಿಂದ ಸರ್ಕಾರದ ಯೋಜನೆಗಳು ಜನರ ಕೈ ಸೇರದೆ ಹಳ್ಳ ಹಿಡಿಯುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಜನರ ಕುಂದು ಕೊರತೆಗಳನ್ನು ಆಲಿಸುವ ಉದ್ದೇಶದಿಂದ ಜೊತೆಗೆ ಸರ್ಕಾರಗಳ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಡಾ|| ಮಂಜು ಸರ್ಜಾ ಹಾಗೂ ಶ್ರೀನಿವಾಸ್ ರೆಡ್ಡಿ ರವರು ಎಂ.ಎನ್.ಪಿ ಎಂಟರ್ ಪ್ರೈಸಸ್ ನೂತನ ಕಚೇರಿಯನ್ನು ಪ್ರಾರಂಭಿಸಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಇಂತಹ ಸಂಘ-ಸಂಸ್ಥೆಗಳು ಸಮಾಜದಲ್ಲಿ ಹೆಚ್ಚಾದಾಗ ಮಾತ್ರ ಸ್ವಾಸ್ಥ ಸಮಾಜ ನಿರ್ಮಾಣ ವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಜುನಾಥ್ ರೆಡ್ಡಿ. ಸರ್ಜಾಪುರ ಶಂಭಯ್ಯ. ಸರ್ಜಾಪುರ ಶ್ರೀನಿವಾಸ್. ಬುಡುಗಪ್ಪ. ಸತೀಶ್ ಕುಮಾರ್, ನೆರಿಗಾ ಶ್ರೀನಿವಾಸ್. ಗೋಪಾಲರೆಡ್ಡಿ. ಬೆಳಕೆರೆ ಮೂರ್ತಿ. ಯಮರೆ ಶಂಕರ್. ಮದುರಾನಗರ ರವಿ. ರಾಮನಾಯಕನಹಳ್ಳಿ ವೆಂಕಟಸ್ವಾಮಿ. ವೆಂಕಟೇಶ್ ಗೌಡರು. ಕರ್ಪೂರು ರಾಮು. ಕೂಗೂರು ಪಾಪಣ್ಣ. ಬಸಣ್ಣ. ವಿಜಯ್. ಕುಮಾರ್. ಸೋಂಪುರ ಕೆಂಪಣ್ಣ.ಅರ್ಜುನ್. ಪೃಥ್ವಿ. ಮಿಲ್ಟಿ ಮಂಜು. ಮರಸೂರು ಶ್ರೀನಿವಾಸರೆಡ್ಡಿ. ಭರತ್ ರೆಡ್ಡಿ. ಹರೀಶ್ ಬಾಬು. ನವೀನ್ ರೆಡ್ಡಿ. ಭದ್ರಿ ಹಾಜರಿದ್ದರು