ಕರವೇಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.17; ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಡಾ. ಮೋದಿ ವೃತದಲ್ಲಿ 78ನೇ ಸ್ವಾತಂತ್ರೋತ್ಸವದ ಹಾಗೂ ಸಂಗೊಳ್ಳಿ ರಾಯಣ್ಣ  ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಧ್ವಜಾರೋಹಣವನ್ನು ಕರವೇ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ನೆರವೇರಿಸಿದರು.ನಂತರ ಮಾತನಾಡಿ  ನಾಡಿಗೆ ಬೇಕಾಗಿರುವುದು ಸಂಗೊಳ್ಳಿ ರಾಯಣ್ಣನಂತ ನಿಷ್ಠೆ ,ಬದ್ಧತೆ. ದೇಶ ರಕ್ಷಣೆ ಮಾಡಲು  ರಾಯಣ್ಣನಂತಹ ಕೆಲವು ಕ್ರಾಂತಿಯ ನಿಲುವುಗಳು ಕಿತ್ತೂರಾಣಿ ಚೆನ್ನಮ್ಮನಂತಹ  ಮತ್ತು ಮಾನವತವಾದಿ ಮಹಾತ್ಮ ಗಾಂಧೀಜಿ ಅಂಥಹ ಇನ್ನು ಹಲವಾರು ಮಹನೀಯರು ಹೋರಾಟದ ಪರಿಸ್ಥಿತಿಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ದೊಡ್ಡ ಮಹತ್ವ ಪಾತ್ರವಹಿಸಿದ್ದರು ಎಂದರು. ಈಗ ನಡೆಯುತ್ತಿರುವುದು ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಕಂದಕ ತರುವಂತ ಕೆಲಸ ಕೆಲವು ರಾಜಕಾರಣಿಗಳು ಮಾಡುತ್ತಿದ್ದಾರೆ ಇದನ್ನು ಬಿಟ್ಟು ಸಂಗೊಳ್ಳಿ ರಾಯಣ್ಣನಂತೆ ನಿಷ್ಠೆ ಪ್ರಾಮಾಣಿಕತೆಯಿಂದ ದೇಶ ಸೇವೆ ಮಾಡಿದರೆ ಸಾಕು ನಮ್ಮ ದೇಶ ಮತ್ತಷ್ಟು ಸುರಕ್ಷಿತವಾಗಿರುತ್ತದೆ ಹಾಗೂ ಭದ್ರತೆವಾಗಿರುತ್ತದೆ. ಇಂದಿನ ಪ್ರಧಾನ ಮಂತ್ರಿಗಳು  ಆರೋಗ್ಯ ಕವಚ, ಗುಣಮಟ್ಟದ ಶಿಕ್ಷಣ ಕೌಶಲ್ಯಕಾರಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಮುಂದಾಗಬೇಕು ಮತ್ತು ಉದ್ಯೋಗ ಸೃಷ್ಟಿ ಮಾಡುವುದಕ್ಕೆ ಮುಂದಾಗಬೇಕು ಎಲ್ಲ ರಾಜ್ಯಗಳಲ್ಲಿ  ಕರ್ನಾಟಕದಲ್ಲಿ ಹೆಚ್ಚು ಐಟಿಬಿಟಿ ಕಂಪನಿಗಳ ತರುವ ಮೂಲಕ ಉದ್ಯೋಗ ಕಟ್ಟಿ ಕೊಡುವಂತಹ ಕೆಲಸ ಮಾಡಬೇಕಾಗಿದೆ ಈಗಿನ   ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬೇಕಾಗಿದೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ  ಕರವೇ  ಶ್ರೀನಿವಾಸ್ ಚಿನ್ನಿಕಟ್ಟಿ .  ನಾಗರಾಜ್,  ಗಿರೀಶ್ ಕುಮಾರ್, ಜಿಲ್ಲಾ ಸಂಚಾಲಕ ಖದರ್ ಬಾಷಾ, ಜಿಲ್ಲಾ ಕಾರ್ಯದರ್ಶಿ ಈಶ್ವರ್, ಸುರೇಶ್,  ಉಪಾಧ್ಯಕ್ಷ ಧೀರೇಂದ್ರ .ಚಂದ್ರು .ಗುರುಮೂರ್ತಿ. ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಬಿವುಲ್ಲಾ .ಆಟೋರಾಫಿಕ್. ದಾದಾಪೀರ್ ಮೊದಲಾದವರು ಉಪಸ್ಥಿತರಿದ್ದರು.