ಇಂದಿನ ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕು: ಡಾ. ವಗ್ಗರ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೭:ವಿವಿಧತೆಯಲ್ಲಿ ಏಕತೆಯನ್ನು ಕಂಡ ಹೆಮ್ಮೆಯ ದೇಶ ನಮ್ಮದು. ಭಾರತ ದೇಶ ಸಂಸ್ಕೃತಿ, ಆಚಾರ, ವಿಚಾರಗಳಿಂದ ಜಗತ್ತಿಗೆ ಮಾದರಿಯಾದ ದೇಶವಾಗಿದೆ, ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ಶ್ರಮದಿಂದ ನಮಗೆ ಸ್ವಾತಂತ್ರ‍್ಯ ದೊರಕಿದೆ, ಸ್ವಾತಂತ್ರ‍್ಯ ಹೋರಾಟಗಾರರನ್ನು, ದೇಶಕ್ಕಾಗಿ ಹೋರಾಡಿದ ಅನೇಕ ಮಹಿನಿಯರನ್ನ ಸದಾ ಸ್ಮರಣಿಸುವ ಕಾರ್ಯವಾಗಬೇಕು, ಇಂದಿನ ಯುವಕರು ದೇಶಾಭಿಮಾನವನ್ನು ಹೊಂದಬೇಕು ಎಂದು ಖ್ಯಾತ ವೈದ್ಯ ಡಾ, ಗೌತಮ ವಗ್ಗರ ಹೇಳಿದರು.
ನಗರದ ಚೇತನಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ೭೮ನೆಯ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ನೆರವೇÀರಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಮಾತನಾಡಿ, ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ತಾಯಿ ಹಾಗೂ ತಾಯ್ನಾಡಿಗಾಗಿ ಹೋರಾಡುವ ಯುವ ಪಡೆಯ ಅವಶ್ಯಕತೆ ಇದೆ ಎಂದು ಹೇಳಿದರು.
ಉಪಾಧ್ಯಕ್ಷ ರೋಹಿತ್ ಜುಗತಿ, ನಿರ್ದೇಶಕ ಡಾ, ನಾಗರಾಜ ಹೇರಲಗಿ, ಸಹಾಯಕ ಆಡಳಿತ ಅಧಿಕಾರಿ ಪ್ರಮೋದ ಕುಲಕರ್ಣಿ, ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್. ಎಸ್. ಬ್ಯಾಕೋಡ, ಮುಖ್ಯೋಪಾಧ್ಯಾಯ ಪ್ರೊ, ಎ. ಎಚ್. ಕೊಳಮಲಿ, ಪಿ. ಯು. ಕಾಲೇಜಿನ ಪ್ರಾಚಾರ್ಯ ವಿಶ್ವನಾಥ ದಾಬಡೆ, ಪ್ರೊ, ಅಶೋಕ ಜತ್ತಿ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.