ಕನ್ನಡವನದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.17; ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಕರುನಾಡ ಕನ್ನಡ ಸೇನೆಯ ಕನ್ನಡ ವನದಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೂರು ವಿಭಾಗದಲ್ಲೂ ಸೇವೆ ಸಲ್ಲಿಸಿದ ಮಾಜಿ ಯೋಧರರಾದ ಷಣ್ಮುಖಪ್ಪ , ರವಿ ಪಾಟೀಲ್, ಕೊಟ್ರೇಶ್, ಗೋಪಾಲ್  ಭಾಗವಹಿಸಿದ್ದರು. ನಂತರ ಕನ್ನಡಪರ ಸಂಘಟನೆ ಒಕ್ಕೂಟದ ಅಧ್ಯಕ್ಷರಾದ ಶಿವಕುಮಾರ್, ಮತ್ತೊಬ್ಬ ಅಧ್ಯಕ್ಷರಾದ ಸೋಮಶೇಖರ್, ಪರಿಸರ ಸಂರಕ್ಷಣೆ ವೇದಿಕೆ ಅಧ್ಯಕ್ಷರಾದ ಗಿರೀಶ್ ದೇವರಮನಿ, ಸಾಮಾಜಿಕ ಹೋರಾಟಗಾರರಾದ ಶ್ರೀಕಾಂತ್ ಎಂ.ಜಿ, ಮಹಿಳಾ ಘಟಕದ ಅಧ್ಯಕ್ಷರಾದ ಸುನಂದ ವರ್ಣಿಕರ್, ವೀರಮ್ಮ, ರಂಜಿತ್ ಪ್ರಾಂಚೆಶ್ ಕುಮಾರ್, ಪ್ರಕಾಶ್ ಇನ್ನು ಅನೇಕರು ಭಾಗವಹಿಸಿದ್ದರು. ಕರುನಾಡ ಕನ್ನಡ ಸೇನೆಯ ರಾಜ್ಯಾಧ್ಯಕ್ಷರು ಮತ್ತು ಪರಿಸರ ಪ್ರೇಮಿಗಳಾದ ಗೋಪಾಲಗೌಡರು ಸ್ವಾಗತಿಸಿ ವಂದಿಸಿದರು.