ಕಲ್ಯಾಣ ಕರ್ನಾಟಕದ ಆರ್ಥಿಕ ಹಿನ್ನಡೆ
ಕಲಬುರಗಿ,ಆ.೧೭- ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಇನ್ನೂ ಆರ್ಥಿಕವಾಗಿ ಹಿಂದುಳಿವೆ ಎಂದು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಶರಥ ಮೇತ್ರೆ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ೩೦ ದಿನಗಳ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕದ ಆರ್ಥಿಕ ವಿಕಾಸ ವಿಷಯ ಕುರಿತು ಮಾತನಾಡಿದರು.
ರಾಜ್ಯದ ಜಿಲ್ಲೆಗಳಿಗೆ ಹೊಲಿಸಿದಾಗ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಾದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರ, ಕೊಪ್ಪಳ, ಬಳ್ಳಾರಿ ಬಹಳ ಹಿಂದುಳಿವೆ. ಆಥಿ೯ಕ ಗುಣಮಟ್ಟ ತೀರ ಕಡಿಮೆಯಾಗಿದೆ. ೨೦೦೨ ರಲ್ಲಿ ನಂಜುAಡಪ್ಪ ವರದಿ ಪ್ರಕಾರ ಕರ್ನಾಟಕದ ೧೭೫ ತಾಲೂಕುಗಳಲ್ಲಿ ಕಲ್ಯಾಣ ಕರ್ನಾಟಕದ ೨೧ ತಾಲೂಕುಗಳು ಅತಿ ಹಿಂದುಳಿದ ತಾಲೂಕುಗಳಾಗಿವೆ. ೨೦೧೩ ರಲ್ಲಿ ಆರ್ಟಿಕಲ್ ೩೭೧ಜೆ ಅನುಷ್ಠಾನವಾದರೂ ಸಹ ಈ ಭಾಗ ಇನ್ನೂ ಚೇರಿಕೆ ಕಂಡಿಲ್ಲ. ಇದಕ್ಕೆ ಮಾನವ ಅಭಿವೃದ್ಧಿ ಸೂಚ್ಯಾಂಕವೇ ಕಾರಣ. ಶಿಕ್ಷಣ, ಅರೋಗ್ಯ ಮತ್ತು ಆದಾಯ ಇವುಗಳ ಮಾನದಂಡಗಳಾಗಿವೆ. ಪ್ರತಿ ವರ್ಷ ಈ ಭಾಗದ ಶೈಕ್ಷಣಿಕ ಫಲಿತಾಂಶ ಕೊನೆಯ ಸ್ಥಾನದಲ್ಲಿರುತ್ತದೆ. ಶೈಕ್ಷಣಿಕವಾಗಿ ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಆರೋಗ್ಯ ಸೌಲಭ್ಯಗಳ ಕೊರತೆ, ಅರೋಗ್ಯದ ಸುಧಾರಣೆಗೆ ಗಮನ ಹರಿಸದೇ ಇರುವುದು. ಅದರಂತೆ ಇಲ್ಲಿನ ಜನರ ಆದಾಯ ಬಹಳ ಕಡಿಮೆಯಾಗಿದೆ. ದುಡಿಯುವರರ ಸಂಖ್ಯೆ ಕಡಿಮೆ ಇದೆ. ಆರ್ಥಿಕವಾಗಿ ಬೆಳೆಯಬೇಕು ಎನ್ನುವ ಮನೋಭಾವನೆ ಜನರಲ್ಲಿ ಇಲ್ಲ. ಈ ಎಲ್ಲ ಕಾರಣಗಳು ಈ ಬಾಗ ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗಿವೆ. ಸರಕಾರ ಇದರ ಬಗ್ಗೆ ಗಮನ ಹರಿಸುತ್ತಿದ್ದು ಕೆಕೆಆರ್‌ಡಿಬಿ ಪ್ರತಿ ವರ್ಷ ೫ ಸಾವಿರ ಕೋಟಿ ಹಣ ಬಿಡುಗಡೆ ಮಾಡುತ್ತದೆ. ಅದನ್ನೂ ಸರಿಯಾಗಿ ಸದುಪಯೋಗ ಮಾಡಿಕೊಳ್ಳುತ್ತಿಲ್ಲ.
ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಮತ್ತು ಪೂಜ್ಯ ಡಾ.ದಾಕ್ಷಾಯಣಿ ಅಪ್ಪ ಅವರು ಶಿಕ್ಷಣಕ್ಕೆ ಹೆಚ್ಚಿನ ಮಟ್ಟದಲ್ಲಿ ಆದ್ಯತೆ ನೀಡಿದಂತೆ ಎಲ್ಲ ಸಂಸ್ಥೆಗಳು ಬೆಳೆಸಬೇಕು. ಇದರಿಂದ ಆಥಿ೯ಕ ಬೆಳವಣಿಗೆಯಾಗಲು ಸಾಧ್ಯ. ಆರ್ಥಿಕವಾಗಿ ಬೆಳೆಯುತ್ತಿರುವ ಬೆಂಗಳೂರು, ಮೈಸೂರು, ಮಂಗಳೂರು ಇನ್ನಿತರ ಜಿಲ್ಲೆಗಳಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಆರ್ಥಿಕ ಪ್ರಗತಿಗೆ ಈ ಭಾಗದ ಜನರು ಹೋರಾಟ ಇರಬೇಕು. ಕೃಷಿ ಮತ್ತು ಕೈಗಾರಿಕೆಯಲ್ಲಿ ಕ್ಷೀಪ್ರ ಕ್ರಾಂತಿ ಆಗಬೇಕು ಎಂದು ಹೇಳಿದರು.