ಸಂಗೊಳ್ಳಿ ರಾಯಣ್ಣ ಹೆಸರೇ ರೋಮಾಂಚನ
ವಿಜಯಪುರ.ಆ೧೭:ಮೊದಲಿಗೆ ತನ್ನ ಐದುನೂರು ಸಹಚರರೊಂದಿಗೆ ಬ್ರಿಟೀಷರ ವಿರುದ್ಧ ಯುದ್ಧ ಸಾರಿದ್ದು ಈಗ್ಗೆ ೮೭. ವರುಷದ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರು ಚೈತನ್ಯ, ಸ್ಫೂರ್ತಿ ತುಂಬಿದಂತಹುದು. ಬ್ರಿಟೀಷರನ್ನು ನಿದ್ದೆಮಾಡದಂತೆ, ಅವರು ಸಂಗೊಳ್ಳಿ ರಾಯಣ್ಣನ ಹೆಸರು ಕನವರಿಸುವಂತೆ ಮಾಡಿದ ವೀರಾಧಿವೀರ ಬ್ರಿಟೀಷ ಕುನ್ನಿಗಳ ಎಂಜಲಿಗೆ ನಾಲಿಗೆ ಚಾಚಿದ ನಮ್ಮವರ ಕುತಂತ್ರಕ್ಕೆ ಬಲಿಯಾಗಿ ಯುದ್ಧದಲ್ಲಿ ಸೋತು ಸೆರೆಯಾಳಾದ ಚನ್ನಮ್ಮ ರಾಣಿಯ ಕನಸನ್ನು ನನಸಾಗಿಸಲು ಪಣತೊಟ್ಟಂತಹ ಛಲದಂಕಮಲ್ಲ ಬ್ರಿಟೀಷರಿಗೆ ಸಿಂಹಸ್ವಪ್ನನಾದ ಶೂರಾಗ್ರಣಿ ಸಂಗೊಳ್ಳಿ ರಾಯಣ್ಣ ಎಂದು ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ್ ತಿಳಿಸಿದರು.
ಅವರು ಅಖಿಲ ಕರ್ನಾಟಕ ಮಿತ್ರ ಸಂಘದ ವತಿಯಿಂದ ೭೮ ನೇ ವರ್ಷದ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಾಂಧಿಚೌಕದಲ್ಲಿರುವ ಅ. ಶಿ. ವೈ. ನಗರ್ತ ಮಹಂತಿನ ಮಠ ಧರ್ಮಸಂಸ್ಥೆಯ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕವಿ ಗೋಷ್ಠಿ ಹಾಗೂ ಸಂಗೋಳಿ ರಾಯಣ್ಣ ನವರ ಜನ್ಮದಿನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ಅದ್ಯಕ್ಷ ಚಿ. ಮಾ. ಸುಧಾಕರ್ ಅದ್ಯಕ್ಷತೆ ವಹಿಸಿ ಮಾತನಾಡಿ. ಸಂಗೊಳ್ಳಿ ರಾಯಣ್ಣನ ನೆನಹು ನಿರಂತರ ಮಕ್ಕಳಲ್ಲಿ ಜಾಗೃತಿಯನ್ನು ರಾಷ್ಟ್ರಪ್ರೇಮವನ್ನು ತುಂಬುವಂತಹದ್ದು. ರಾಯಣ್ಣನು ಜನಿಸಿದ್ದು ಅಗಷ್ಟ ೧೫ ಭಾರತ ಸ್ವತಂತ್ರ ಕಂಡ ದಿನ, ಹಾಗೆ ಹುತಾತ್ಮನಾದ ದಿನ ಜನೇವರಿ ೨೬, ಅಂದರೆ ಪ್ರಜಾರಾಜ್ಯೋತ್ಸವದ ದಿನ, ಎರಡೂ ಅವಿಸ್ಮರಣೀಯ ದಿನಗಳೇ. ಭಾರತರತ್ನ ಜನಿಸಿದ್ದು ಹುತಾತ್ಮನಾದದ್ದು ಹಾಗೇ ಕೇವಲ ತನ್ನ ಜೀವಿತಾವಧಿಯ ಅತ್ಯಂತ ಅಲ್ಪ ಸಮಯದಲ್ಲಿ ೩೮ ವರುಷದಲ್ಲಿ ಸಾಧಿಸಿದ್ದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ರಚಿಸುವಂತಹದು ಎಂದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಹಡಪದ್ ಹಾಗೂ ಮ. ಸುರೇಶ್ ಬಾಬು ಕವನವಾಚನ ಮಾಡಿದರು. ಗೌರವ ಕಾರ್ಯದರ್ಶಿ ಆರ್. ಮುನಿರಾಜು, ಕಾರ್ಯಾಧ್ಯಕ್ಷರಾದ ವಿ. ವಿಶ್ವನಾಥ್ ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.