ದಾವಣಗೆರೆಯ ಕಾನಿಪದಲ್ಲಿ ಧ್ವಜಾರೋಹಣ
ದಾವಣಗೆರೆ. ಆ.17; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಪಾಲಿಕೆ ಆವರಣದಲ್ಲಿನ ಜಿಲ್ಲಾ ಸಂಘದ ಕಚೇರಿಯ ಆವರಣದಲ್ಲಿ 78ನೇ ಸ್ವಾತಂತ್ರö್ಯ ದಿನಾಚರಣೆ ಆಚರಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ್  ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕ್ರುದ್ದೀನ್, ಖಜಾಂಚಿ ಎನ್.ವಿ. ಬದರೀನಾಥ್, ಜಿಲ್ಲಾ ಉಪಾಧ್ಯಕ್ಷರಾದ  ಆರ್.ಎಸ್.  ತಿಪ್ಪೇಸ್ವಾಮಿ  ಹೆಚ್.ಎನ್. ಪ್ರಕಾಶ್ ಕಾರ್ಯದರ್ಶಿ ಜಿ.ಎಸ್. ವೀರೇಶ್ ನಿರ್ದೇಶಕರಾದ ಕೆ.ಸಿ. ಮಂಜುನಾಥ್, ಹೆಚ್. ಚಂದ್ರಶೇಖರ್, ಎನ್.ಕೆ. ಕೊಟ್ರೇಶ್ ಮತ್ತಿತರರಿದ್ದರು.