‘ಹೋಟೆಲ್ ಮಯೂರ ರಾಯಲ್ ಹೆರಿಟೇಜ್’ ಉದ್ಘಾಟನೆ
ಕರ್ನಾಟಕ ರಾಜ್ಯ ಪುವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರವಾಸೋದ್ಯಮ ಇಲಾಖೆಯ ಅಂಗಸಂಸ್ಥೆಯಾಗಿದ್ದು, ಕಳೆದ ೫೩ ವರ್ಷಗಳಿಂದ ಆತಿಥ್ಯ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆತಿಥ್ಯ ಸೇವೆಯನ್ನು ಒದಗಿಸುತ್ತಾ ಬಂದಿರುತ್ತದೆ.
ಊಟಿ ಪ್ರವಾಸ ತಾಣದಲ್ಲಿ ನಿಗಮದಿಂದ ವಿನೂತನವಾಗಿ ಪ್ರಾರಂಭಿಸಿರುವ ಅತಿಥಿ ಗೃಹ “ಹೋಟೆಲ್ ಮಯೂರ ರಾಯಲ್ ಹೆರಿಟೇಜ್ ಅನ್ನು ಕೆ.ಎಸ್.ಟಿ.ಡಿ.ಸಿ.ಯ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಶ್ರೀನಿವಾಸ್ ಅವರು ಇತ್ತೀಚೆಗಷ್ಟೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆಎಸ್‌ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ.ವಿ. ರಾಜೇಂದ್ರ ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.
ಹೋಟೆಲ್ ಮಯೂರ ಸುದರ್ಶನದಿಂದ ಕೇವಲ ೧ ಕಿಮೀ ದೂರದಲ್ಲಿರುವ ಈ ಐಷಾರಾಮಿ ಹೋಟೆಲ್ ಒಮ್ಮೆ ಮೈಸೂರು ಮಹಾರಾಜರ ದಿವಾನರ ನಿವಾಸವಾಗಿತ್ತು. ಅದೇ ರಾಯಲ್ ವಾತಾವರಣದೊಂದಿಗೆ ಅತಿಥಿಗಳನ್ನು ಸತ್ಕರಿಸಲು ಸಿದ್ಧವಾಗಿದೆ. ೧೭ ಎಕರೆ ವಿಸ್ತೀರ್ಣದಲ್ಲಿ ವುಡ್ ಹೌಸ್‌ಗಳು, ಡೂಮ್ ಹೌಸ್‌ಗಳು ಮತ್ತು ಹೆರಿಟೇಜ್ ರೂಮ್‌ಗಳು ಸೇರಿದಂತೆ ೨೧ ರಮಣೀಯ ಕೊಠಡಿಗಳನ್ನು ಒಳಗೊಂಡಿದ್ದು, ಈ ಅತಿಥಿ ಗ್ರಹದಲ್ಲಿ ಮಲ್ಟಿ-ಕ್ಯುಸಿನ್ ರೆಸ್ಟೋರೆಂಟ್, ಕಾರ್ಪೊರೇಟ್ ಬೋರ್ಡ್ ರೂಂ, ಒಳಾಂಗಣ ಆಟಗಳು, ಮಕ್ಕಳ ಆಟದ ಪುದೇಶ, ಉಚಿತ ವೈ-ಫೈ ಹಾಗೂ ಪಾಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಆಧುನಿಕ ಸೌಕರ್ಯಗಳ ಜೊತೆಗೆ ಕರ್ನಾಟಕ ಸಿರಿ ತೋಟಗಾರಿಕೆ ಉದ್ಯಾನವನ್ನು ವೀಕ್ಷಿಸಬಹುದು.
೧ನೇ ಸೆಪ್ಟೆಂಬರ್-೨೦೨೪ ರಿಂದ ಹೋಟೆಲ್ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆಯಲಿಚ್ಛಿಸುವ ಪ್ರವಾಸಿಗರು ನಿಗಮದ ಅಧಿಕೃತ ವೆಬ್ ಸೈಟ್ ಹಾಗೂ ಯಶವಂತಪುರ ಕೇಂದ್ರ ಕಚೇರಿಯ ಬುಕ್ಕಿಂಗ್ ಕೌಂಟರ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆನ್‌ಲೈನ್ ಬುಕ್ಕಿಂಗ್ www.kstdc.co, ದೂರವಾಣಿ ಸಂಖ್ಯೆ ೦೮೦-೪೩೩೪ ೪೩೩೪/೩೫, ೯೧ ೮೯೭೦೬೫೦೦೭೦, ೮೯೭೦೬೫೦೦೭೫ ಗೆ ಸಂಪರ್ಕಿಸಬಹುದೆಂದು ಪ್ರಧಾನ ವ್ಯವಸ್ಥಾಪಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.