ಮಹನೀಯರ ಸ್ಮರಿಸುವ ಸುದಿನವೇ ಸ್ವಾತಂತ್ರ್ಯೋತ್ಸವ;  ಡಾ. ರಾಘವೇಂದ್ರ ಗುರೂಜಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.17;  ಬ್ರಿಟಿಷರ ದಾಸತ್ವದಿಂದ ಬೇಸತ್ತು, ಸರ್ವ ಸ್ವಾತಂತ್ರö್ಯಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟು, ತ್ಯಾಗ ಬಲಿದಾನಗಳಿಂದ ಪಡೆದ ಈ ಸುದಿನವೇ 78ನೇ ವರ್ಷದ ಸ್ವಾತಂತ್ರೊö್ಯÃತ್ಸವ, ದೇಶಪ್ರೇಮದಿಂದ ಸಹಸ್ರಾರು ಯೋಧರು, ಹೋರಾಟಗಾರರು ಪ್ರಾಣವನ್ನು ಬಲಿಕೊಟ್ಟು ಸ್ವಾತಂತ್ರö್ಯವನ್ನು ತಂದುಕೊಟ್ಟರು. ಅವರನ್ನೆಲ್ಲಾ ಸ್ಮರಿಸಿ ಕೃತಜ್ಞತೆ ಅರ್ಪಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗಗುರು ಡಾ.ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು. ನಗರದ ಪಿ.ಜೆ. ಬಡಾವಣೆಯಲ್ಲಿರುವ ಎಸ್.ಕೆ.ಪಿ. ವಿದ್ಯಾಪೀಠದ ಬ್ಯಾಡಗಿ ಶೆಟ್ರು ಹಿರಿಯ ಪ್ರಾಥಮಿಕ ಮತ್ತು ಕೆ.ವಿ.ಎಸ್. ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರೊö್ಯÃತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.ಸ್ವಾತಂತ್ರö್ಯವನ್ನು ಪಡೆದುಕೊಳ್ಳಲು ಗಾಂಧೀಜಿಯವರು ಅಹಿಂಸಾ ಮಾರ್ಗವನ್ನು ಹಿಡಿದು ದೇಶಪ್ರೇಮಿಗಳನ್ನು ಒಟ್ಟುಗೂಡಿಸಿ ಸತ್ಯಾಗ್ರಹ ಚಳುವಳಿ ಇತ್ಯಾದಿಗಳನ್ನು ಹಮ್ಮಿಕೊಂಡು ಬ್ರಿಟಿಷರಿಗೆ ಭಾರತ ಬಿಟ್ಟು ತೊಲಗಿ ಎಂದು ಆಗ್ರಹಿಸಿದರು. ಇದರ ಪ್ರತೀಕ ಸಹಸ್ರಾರು ವೀರ ಯೋಧರ, ದೇಶ ಪ್ರೇಮಿಗಳ ಬಲಿದಾನ ತ್ಯಾಗದಿಂದ ಮಾತ್ರ ಸಾಧ್ಯವಾಯಿತು ಎಂಬುದನ್ನು ನಾವು ಯಾವತ್ತೂ ಮರೆಯುವಂತಿಲ್ಲ. ಆದರೂ ಸ್ವಾತಂತ್ರö್ಯ ಗಳಿಸಿ 78 ವರ್ಷಗಳು ಕಳೆದರೂ ಅನೇಕ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ಸಾಧಿಸಬೇಕಾಗಿದ್ದು ಇನ್ನೂ ಇದೆ. ಇಂದಿನ ಯುವ ಪೀಳಿಗೆ ಇದನ್ನು ಅರಿತು ಬಾಲ್ಯದಿಂದಲೇ ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಆಗ ಮಾತ್ರ ನಾವು ಸುಭದ್ರ ದೇಶ ಕಟ್ಟಲು ಸಾಧ್ಯವಾದೀತು ಎಂದು ಮಕ್ಕಳಿಗೆ ಕಿವಿಮಾತು ಹೇಳುತ್ತಾ, ಏಕಾಗ್ರತೆಗೆ ಸಹಯಕಾರಿಯಾಗುವ ಕೆಲವು ಆಟಗಳನ್ನು ಹೇಳಿಕೊಟ್ಟರು.
ಶಾಲಾ ಸಹ ಶಿಕ್ಷಕರಾದ ಬಿ.ಎನ್. ಮಂಜುನಾಥ ಮಾತನಾಡಿ ದೇಶವು ಸುಭದ್ರವಾಗಿರಬೇಕಾದರೆ ನಮ್ಮ ಗಡಿಯನ್ನು ಕಾಯುವ ಯೋಧರ ಶ್ರಮವು ತುಂಬಾ ಮಹತ್ವದ್ದು, ಅವರ ಸೇವೆಗೆ ನಾವು ಸದಾ ಚಿರಋಣಿಯಾಗಿರಬೇಕು ಇಂದು ನಮ್ಮ ಶಾಲೆಯ ಚಿಕ್ಕ-ಚಿಕ್ಕ ಮಕ್ಕಳು ಸ್ವಾತಂತ್ರö್ಯವನ್ನು ತಂದುಕೊಟ್ಟ ಅನೇಕ ಮಹನೀಯರ ಪೋಷಾಕು ಧರಿಸಿ ಸ್ವಾತಂತ್ರೊö್ಯÃತ್ಸವದ ಶುಭವನ್ನು ಕೋರಿದ ಸಂದರ್ಭ ‘ಬೆಳೆಯವ ಸಿರಿ ಮೊಳಕೆಯಲ್ಲಿ’ ಎಂಬAತೆ ಮಕ್ಕಳ ಆಸಕ್ತಿ ನೋಡಿ ಸಂತೋಷವಾಯಿತು. ಇವರನ್ನು ತಯಾರು ಮಾಡಿ ಶಾಲೆಗೆ ಕರೆತಂದ ಪೋಷಕರನ್ನು ತುಂಬು ಹೃದಯದಿಂದ ಅಭಿನಂದಿಸಿದರು. ಮತ್ತೋರ್ವ ಅತಿಥಿ ಕೆ.ವಿ.ಎಸ್. ಶಾಲೆಯ ಅಧ್ಯಕ್ಷರಾದ ಜಿ.ವಿ. ಗೋಪಾಲಕೃಷ್ಣ ಮಾತನಾಡಿ ಪ್ರತಿಯೊಬ್ಬ ಪ್ರಜೆಯು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಸ್ವಾತಂತ್ರö್ಯಕ್ಕಾಗಿ ಬಲಿದಾನ ಮಾಡಿದ ಮಹಾತ್ಮರನ್ನು ಸ್ಮರಿಸಿ ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು ಎಂದರು.