೭೮ನೇ ಸ್ವಾತಂತ್ರೋತ್ಸವ ದಿನಾಚರಣೆ
ಇಂಡಿ,ಆ.೧೭ ಭಾರತ ವಿಶ್ವದಲ್ಲೇ ಬಲಾಡ್ಯ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಇದಕ್ಕೆ ಭಾರತದ ಸಂವಿಧಾನ ಪ್ರಮುಖವಾಗಿದ್ದು ಡಾ, ಬಿ ಆರ್ ಅಂಬೇಡ್ಕರ್ ಅವರು ನ್ಯಾಯ, ನೀತಿ, ಸಮಾನತೆ ನೀಡಿ ಪ್ರತಿಯೊಬ್ಬ ನಾಗರಿಕನಿಗೆ ಸಮಾನತೆ ಬದಕು ಕಟ್ಟಿ ಕೊಟ್ಟಿದೆ ಎಂದು ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅಧ್ಯಕ್ಷ ಶ್ರೀ ಮುಸ್ತಾಕ್ ನೈಕೋಡಿ ಹೇಳಿದರು. ನಗರದ ವಿಜಯಪುರ ರಸ್ತೆಯಲ್ಲಿರುವ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ೭೮ನೇ ಸ್ವತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿರುವಂತ ಮೌಲನ ಶಾಕಿರ್ ಹುಸೇನ್ ಕಾಶ್ಮೀ,, ಸಂಸ್ಥೆಯ ಅಧ್ಯಕ್ಷ ಶ್ರೀ ಮುಸ್ತಾಕ ನೈಕೋಡಿ ಧ್ವಜಾರಣೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಎಸ್ ಎ ನಾಲಬಂದ, ಸಂಜೆಯ ಜಾಧವ್, ಮೋಹನ್ ರಾಥೋಡ್, ಬಾಬರ್ ಮಾಶಾಲ್ಕರ್, ರಫೀಕ್ ಜಾತ್ಕಾರ, ಮಲಕಪ್ಪ ಸಾಳವಾಡ, ಶಾಲೆಯ ಮುಖ್ಯಗುರುಗಳಾದ ಶ್ರೀ ಹೆಚ್. ಕೆ ನಾಯಕೋಡಿ, ಮತ್ತು ಪ್ರೌಡ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಂ ಎಸ್ ಕಂಬಾರ, ಮತ್ತು ಶಾಲಾ ಆಡಳಿತಾಧಿಕಾರಿಗಳಾದ ಶ್ರೀ ದಾದಾಹಿದಾಯತ್ ಎ ನಾಯಕೊಡಿ, ಮತ್ತು ಬಾಷಾ ಬೋರಾಮಣಿ, ಗುರುಗಳು ಉಪಸ್ಥಿತರಿದ್ದರು. ವಾಣಿ ಪತ್ತಾರ ಹಾಗೂ ಅಶ್ವಿನಿ ಕರ್ಕಿ ಶಿಕ್ಷಕಿಯರು ನಿರೂಪಿಸಿದರು.