ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೇವೇಂದ್ರಪ್ಪ ಗಣಮುಖಿಗೆ ಸತ್ಕಾರ
ಕಲಬುರಗಿ.ಆ.೧೭: ರಾಜ್ಯ ಮತ್ತು ರಾಷ್ಟç ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸಂಘದ ವತಿಯಿಂದ ತಾಲೂಕಿನ ಝಾಪೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ ಅವರಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದುರ ಪ್ರಯುಕ್ತ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ನಗರದ ಜಗತ ಬಡಾವಣೆಯ ಶರಣ ಡೋಹರ ಕಕ್ಕಯ್ಯ ದೇವಸ್ಥಾನದಲ್ಲಿ ಶುಕ್ರವಾರ ಸತ್ಕರಿಸಿ, ಅಭಿನಂದಿಸಲಾಯಿತು.
ಹೋರಾಟಗಾರ ಡಾ.ಲಕ್ಷö್ಮಣ ದಸ್ತಿ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿAಗಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸಂಘಟನಾ ಕಾರ್ಯದರ್ಶಿ ಸಾಯಬಣ್ಣ ಹೋಳ್ಕರ್, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ಶಿವಪುತ್ರ ಗೊಬ್ಬೂರಕರ್, ರಮೇಶ ಗಾಯಧನಕರ್, ಬಾಬುರಾವ ಕಟಕೆ, ಅಶೋಕ ಖರಟಮಲ್ಲ, ದಿನೇಶ ಸೇರಿದಂತೆ ಇನ್ನಿತರರಿದ್ದರು.