ಬಸವ ಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ೭೮ ನೇ ಸ್ವಾತಂತ್ರ‍್ಯ ದಿನಾಚರಣೆ
ಅಫಜಲಪುರ.ಆ.೧೭: ಪಟ್ಟಣದ ಶ್ರೀ ಬಸವ ಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡ ೭೮ ನೇ ಸ್ವಾತಂತ್ರ‍್ಯೋತ್ಸವ ರಾಷ್ಟ್ರ ಧ್ವಜಾರೋಹಣವನ್ನು ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶಿಲ್ಪಾ ಬಿ. ಎನ್ ರವರು ನೆರವೇರಿಸಿದರು.
ಸಾನಿಧ್ಯವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಶಂಕರಾಚಾರ್ಯ ಮಹಾಮನಿ ವಹಿಸಿಕೊಂಡರು. ಉದ್ಘಾಟನೆಯನ್ನು ಉದ್ದಿಮೆದಾರರಾದ ಶಂಕರ ಮ್ಯಾಕೇರಿ ನೆರವೇರಿಸಿದರು. ಕಾರ್ಯಕ್ರಮದ ನೇತೃತ್ವ ರಮೇಶ ಗಾಂಧಿ ನಿಂಬರ್ಗಿ ವಹಿಸಿದರು. ಮುಖ್ಯ ಅತಿಥಿಗಳಾಗಿ ರಾಜಕುಮಾರ ಉಕ್ಕಲಿ, ಸದಾಶಿವ ದಿವಾಣಜಿ, ಎಸ್. ಎಂ ಕರಿಕಲ್, ಸಂಗನಗೌಡ ಪಾಟೀಲ್, ಮರೆಪ್ಪ ಶಿವಪೂರ, ಚಿದಾನಂದ ಸೋನಾರ್, ಪ್ರಭಾಕರ್ ಸಾಳುಂಕೆ ಆಗಮಿಸಿದ್ದರು.
ವಿಶೇಷ ಉಪನ್ಯಾಸವನ್ನು ಬಸವ ಜ್ಯೋತಿ ಶಿಕ್ಷಣ ಸಂಸ್ಥೆಯ ಶಿಕ್ಷಕ ನವೀನ್ ಕುಮಾರ್ ಹಾಗೂ ಶಿಕ್ಷಕಿ ರೋಹಿಣಿ ಜಮಾದಾರ್ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಪವಿತ್ರಾ ಬಿ, ಸ್ವಾಗತವನ್ನು ಲಕ್ಷ್ಮಿ ಹಡಲಗಿ ಹಾಗೂ ವಂದನಾರ್ಪಣೆಯನ್ನು ಶ್ವೇತ ರವರು ನಡೆಸಿಕೊಟ್ಟರು.