ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟ: ಶಾಂತಿನಿಕೇತನ ಶಾಲೆ ವಲಯ ಮಟ್ಟಕ್ಕೆ ಆಯ್ಕೆ
ವಿಜಯಪುರ,ಅ.1:ಜಿಲ್ಲಾ ಪಂಚಾಯತಿ, ವಿಜಯಪುರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ನಗರ ವಲಯ ಇವರ ಸಹಯೋಗದಲ್ಲಿ 2024-25ನೇ ಸಾಲಿನ ಪ್ರಾಥಮಿಕÀ ಮತ್ತು ಪ್ರೌಢ ಶಾಲೆಗಳ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ಬ್ಯಾಂಡ್ಮಿಂಟನ್ ಕ್ರೀಡಾಕೂಟದಲ್ಲಿ ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ವಿಶಿಷ್ಟ ಸಾಧನೆಯನ್ನು ಮಾಡಿ ವಲಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14 ವರ್ಷ ವಯೋಮಾನದ ಬಾಲಕಿಯರ ಬ್ಯಾಂಡ್ಮಿಂಟನ್ ವಿಭಾಗದಲ್ಲಿ ವೈಭವಿ ಹುಟಗಿ, ಸ್ನೇಹಶ್ರೀ ಬಿರಾದಾರ, ತನ್ವಿ ಭೋಸಲೆ, ಸೃಷ್ಟಿ ಸೋನಿ ಪ್ರಥಮ ಸ್ಥಾನವನ್ನು, 17 ವರ್ಷದ ವಯೋಮಾನದ ಒಳಗಿನ ಬಾಲಕಿಯರ ಬ್ಯಾಂಡ್ಮಿಂಟನ್ ವಿಭಾಗದಲ್ಲಿ ವೈಷ್ಣವಿ ಚೌಧರಿ, ಲಕ್ಷ್ಮಿ ಉತ್ನಾಳ, ಆಧ್ಯಾ ನಾವಿ, ಸಹನಾ ತುಪ್ಪದ, ಅನನ್ಯ ಆಲೂರ ಪ್ರಥಮ ಸ್ಥಾನವನ್ನು ಹಾಗೂ 14 ವರ್ಷದ ವಯೋಮಾನದ ಒಳಗಿನ ಬಾಲಕರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಆಯಾನ್ ಹುಲ್ಲೂರ, ಸಮರ್ಥ ಕಲ್ಮಡಿ, ಪ್ರಜ್ವಲ ಚವ್ಹಾಣ, ಅಖಿಲೇಷ ಸೂರ್ಯವಂಶಿ, ಜಯ ಪಾಟಿದಾರ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಈ ಕ್ರೀಡಾಕೂಟದಲ್ಲಿ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ, ಚೇರಮನ್ ಡಾ. ಸುರೇಶ ಬಿರಾದಾರ, ನಿರ್ದೇಶಕಿ ದಿವ್ಯಾ ಬಿರಾದಾರ, ಪ್ರಾಚಾಂiÀರ್i ಶ್ರೀಧರ ಕುರಬೇಟ, ದೈಹಿಕ ಶಿಕ್ಷಕರಾದ ಎ.ಎಚ್. ಸಗರ, ಕಿರಣ ರಾಠೋಡ, ಪ್ರವೀಣ ಗೆಣ್ಣೂರ ಅಭಿನಂದನೆಯನ್ನು ಸಲ್ಲಿಸಿದ್ದಾರೆ.