ನಮ್ಮ ಭವಿಷ್ಯವನ್ನು ನಾವೇ ಬರೆಯಬೇಕು: ಆರ್. ಕೆ ಹುಡಗಿ
ಕಲಬುರಗಿ: ಅ.1: ನಮ್ಮ ಭವಿಷ್ಯ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಶಿಕ್ಷಕರಾದವರು ವರ್ತಮಾನದ ಕೆಲಸಗಳ ಮೂಲಕ ಅತ್ಯುತ್ತಮ ಭವಿಷ್ಯವನ್ನು ನಿರ್ಮಿಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ ಎಂದು ಚಿಂತಕ ಪೆÇ್ರ. ಆರ್ ಕೆ ಹುಡಗಿ ಹೇಳಿದರು.
ಬಿ.ಜಿ.ವಿ.ಎಸ್ ಕಲಬುರಗಿ ವತಿಯಿಂದ ಕೆಪಿಎಸ್ ಶಾಲೆ ಕಲಬುರ್ಗಿಯಲ್ಲಿ ಹಮ್ಮಿಕೊಂಡ “ಸಾಧಕ ಶಿಕ್ಷಕರ ವಿನೂತನ ಕಾರ್ಯಗಳು ಎಂಬ ಒಂದು ಮಂಥನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಯೋಜನಾ ಉಪ ನಿರ್ದೇಶಕರಾದ ಚನ್ನಬಸಪ್ಪ ಮುಧೋಳ ಅವರು ಮಾತನಾಡಿ, ಉತ್ತಮ ಕಾರ್ಯಗಳನ್ನು ಮಾಡಿ ‘ಸಾಧಕ ಶಿಕ್ಷಕ’ ಎಂದು ಗುರುತಿಸಿಕೊಂಡ ಶಿಕ್ಷಕರು ಯಶಸ್ಸಿನ ಗುಂಗಿನಲ್ಲಿ ಕಳೆದು ಹೋಗದೆ ತಮ್ಮ ಕೆಲಸಗಳಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದೆ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ವಿನೂತನವಾಗಿ ಕೆಲಸ ಮಾಡಿದ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ, ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚಿತಾಪುರ ಬಿಇಓ ಶಶಿಧರ್, ವಿಷಯ ಪರಿವೀಕ್ಷಕರಾದ ನಾಗೇಂದ್ರಪ್ಪ ಅವರಾದ, ಎಪಿಎಫ್ ನ ಜಗನ್ನಾಥ್ ಡೆಂಗಿ, ಶಿಕ್ಷಕರಾದ ಶರಣಬಸಪ್ಪ ನಾಟಿಕಾರ್, ಶ್ರೀನಿವಾಸ್ ಯಾದವ, ಸಚಿನ್ ಹಿರೇಮಠ, ಉಷಾ ಗೊಬ್ಬುರ, ಈರಮ್ಮ ಸುತಾರ, ಭರಮಲಿಂಗ ಜಕಾಪುರೆ, ಶರಣಬಸಪ್ಪ ಓಗೆ, ಅಭಯಶೀಲಾ, ಭಾರತಿ ಹಿರೇಮಠ, ಶ್ರೀಶೈಲ ಮಾಡ್ಯಾಳೆ, ಪ್ರಭಾಕರ್ ಸಲಗರೆ ಹಾಗೂ ಜಿಲ್ಲೆಯ ಶಿಕ್ಷಕರು ಭಾಗವಹಿಗಿದ್ದರು. ರವಿಚಂದ್ರ ಅತನೂರ ನಿರೂಪಿಸಿದರು. ರವೀಂದ್ರ ರುದ್ರವಾಡಿ ವಂದಿಸಿದರು.