ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ಪ್ರಗತಿ: ಸಂತೋಷಕುಮಾರ ರೈ
ವಿಜಯಪುರ,ಅ.1 :ನಾಡಿನ ಜನತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಅಗತ್ಯ ಸಹಕಾರ ನೀಡುತ್ತಿದೆ. ಇದರಿಂದ ಪುರುಷರಷ್ಟೇ ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಜಿಲ್ಲಾ ನಿರ್ದೇಶಕ ಸಂತೋಷಕುಮಾರ ರೈ ಅವರು ಹೇಳಿದರು.
ನಗರದ ಜನತ್ ಹಾಲ್ ನಲ್ಲಿ ವಿಜಯಪುರ ತಾಲೂಕು ಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸದಸ್ಯರ ಪ್ರಬುದ್ಧತೆ, ದಶಾಂಶಗಳ ಬಗ್ಗೆ ಮಾಹಿತಿ, ಸಂಘಗಳಿಗೆ ನೀಡುವ ಪ್ರಗತಿ ನಿಧಿ ಮರುಪಾವತಿ ಚೀಟಿ, ಮಾಸಿಕ ವರದಿ, ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ನಿರ್ವಹಣೆ ಮುಂತಾದ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ಕುಲಕರ್ಣಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಗರ ಸಂಚಾಲಕ ರಾಜು ಎಲ್ ತೊರವಿ, ಬ್ಯಾಂಕ್ ಆಫ್ ಬರೋಡ ವಿಜಯಪುರ ಶಾಖಾ ಪ್ರಬಂಧಕ ಮಹಾನ್ ಅವರು ಭಾಗವಹಿಸಿದ್ದರು.
ಬ್ಯಾಂಕ್ ಆಫ್ ಬರೋಡದ ಪ್ರಬಂಧಕರು ಸಿಸಿ ಖಾತೆಯ ಬಗ್ಗೆ,ಬ್ಯಾಂಕಿನ ಬಡ್ಡಿ ದರ,ಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ವ್ಯಾಪ್ತಿಯ ಯೋಜನಾಧಿಕಾರಿ ಮಾಂತೇಶ, ತಾಲೂಕು ಯೋಜನಾಧಿಕಾರಿ ಸತೀಶ, ತಾಲೂಕಿನ ಎಲ್ಲಾ ಮೇಲ್ವಿಚಾರಕರು ಹಾಗೂ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು, ಸಿ.ಎಸ್.ಸಿ ಸೇವಾದಾರರು, ತಾಲೂಕಿನ 55 ಒಕ್ಕೂಟದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.