ಗುಂಡ್ಲುಪೇಟೆ 78 ನೇ ಸ್ವಾತ್ರಂತ್ರ ದಿನಾಚರಣೆ ಆಚರಣೆ
ಸಂಜೆವಾಣಿ ವಾರ್ತೆ
ಗುಂಡ್ಲುಪೇಟೆ ಆ 17 :- ಪಟ್ಟಣದಲ್ಲಿ ರಾಜ್ಯ ಮೂಲಭೂತ ಹಕ್ಕುಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಮಿತಿ ಕಚೇರಿಯ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ ಕಾರ್ಯಕ್ರಮ ನಡೆಯಿತು.
ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಮಿತಿ ರಾಜ್ಯಾಧ್ಯಕ್ಷ ಲಕ್ಷ್ಮಿ ಮಹೇಶ್ ಅವರು ಧ್ವಜಾರೋಹಣವನ್ನು ನೇರವೇರಿಸಿ, ರಾಷ್ಟ್ರಗೀತೆಯನ್ನು ಹಾಡಿ ಗೌರವ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಲಕ್ಷ್ಮೀಮಹೇಶ್, ರಾಜ್ಯ ಉಪಾಧ್ಯಕ್ಷರು ಕಿಲಗೆರೆ ಶ್ರೀಕಂಠಪ್ಪ, ರಾಜ್ಯಸಮಿತಿ ಸದ್ಯರು ಮಾಡ್ರಲ್ಲಿ ಮಹೇಶ್, ಚಾಮರಾಜನಗರ ಜಿಲ್ಲಾಧ್ಯಕ್ಷರು ಬೊಮ್ಮನಹಳ್ಳಿ ಮಂಜುನಾಥ್, ಜಿಲ್ಲಾ ಗೌರವ ಅಧ್ಯಕ್ಷರು ಬೆಳವಾಡಿ ರಾಜಪ್ಪ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷರು ಕಿಲಗೆರೆ ವಾಸು, ತಾಲ್ಲೂಕು ಗೌರವ ಅಧ್ಯಕ್ಷರು ಭೀಮನಬೀಡು ದೇವಣ್ಣ, ಉಪಾಧ್ಯಕ್ಷರು ಲಕ್ಕೂರು ಸುರೇಶ,ಖಜಾಂಚಿ ನಾಗರಾಜು ಹಾಗೂ ಸಂಚಾಲಕರು ಮಾದೇವಪ್ಪ ಹಾಗೂ ವಿಶೇಷ ಅತಿಥಿಗಳಾಗಿ ಗವಿಘರ್ಜನೆ ಸಂಪಾದಕರು ಬೆಳವಾಡಿ ಗವಿಸ್ವಾಮಿ ಹಾಗೂ ಯುವ ಮುಖಂಡರಾದ ಟೆರೇಕನಾoಬಿ ಹುಂಡಿ ಈಶ್ವರ ಹಾಗೂ ಸದಸ್ಯರು ಸಾರ್ವಜನಿಕರು ಹಾಜರಿದ್ದರು.