ಪೆÇ್ರ.ಅ.ನ.ಮೂರ್ತಿರಾಯರ ಪುತ್ಥಳಿ ಲೋಕಾರ್ಪಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.17:ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶತಾಯುಷಿ ಪೆÇ್ರಫೆಸರ್ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾಯರ ಪುತ್ಥಳಿಯನ್ನು ಶಾಸಕ ಎಚ್.ಟಿ.ಮಂಜು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಪೆÇ್ರಫೆಸರ್ ಮೂರ್ತಿರಾಯರು ಅಕ್ಕಿಹೆಬ್ಬಾಳು ಗ್ರಾಮದವರು ಎಂಬುವುದು ನಮ್ಮ ಹೆಮ್ಮೆ ಅಕ್ಕಿಹೆಬ್ಬಾಳು ಗ್ರಾಮದಿಂದ ಪ್ರಾರಂಭವಾದ ಸಾಹಿತ್ಯ ಕೃಷಿಯು ಇಡೀ ವಿಶ್ವವೇ ತಿರುಗಿನೋಡುವ ಹಾಗೆ ಮಾಡಿದೆ ಪಂಪ ಪ್ರಶಸ್ತಿ ಪಡೆದಿರುವ ದೇವರು ಕೃತಿ ನಿಜಕ್ಕೂ ಸಾಹಿತ್ಯದ ಹೊಸ ಅಧ್ಯಯನವೇ ಬದಲಾಗುವ ಹಾಗೆ ಮಾಡುತ್ತದೆ.ಸಾಹಿತ್ಯ ಕೃಷಿಯನ್ನು ಪ್ರಬಂಧಗಳ ಮೂಲಕ ವಿಭಿನ್ನ ಸಾಹಿತ್ಯವನ್ನು ಬರೆದು ನಮ್ಮ ಅಕ್ಕಿಹೆಬ್ಬಾಳು ಗ್ರಾಮಕ್ಕೆ ಹೆಮ್ಮೆ ತರುವ ಹಾಗೆ ಮಾಡಿದ್ದಾರೆ ಎಂದು ಹೇಳಿದರು. ಇದರೊಂದಿಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಮೀರ್ ಅಹಮದ್ ಮತ್ತು ಸಮಾಜ ಸೇವಕ ಎ.ಆರ್.ರಘು ಸೇರಿ ಈ ರೀತಿಯ ಪರಿಕಲ್ಪನೆ ಮಾಡಿಕೊಂಡು ಸುಂದರ ವೃತ್ತವನ್ನು ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿರುವ ವಿಷಯ ಇದೇ ರೀತಿ ಪ್ರತಿ ಗ್ರಾಮಗಳಲ್ಲೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳ ಹೆಸರಿನಲ್ಲಿ ವೃತ್ತಗಳನ್ನು ನಿರ್ಮಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಯುವಪೀಳಿಗೆಯೂ ಸ್ಪೂರ್ತಿದಾಯಕ ಸಾಧನೆಗಳತ್ತ ತಿರುಗುತ್ತದೆ ಎಂದು ಹೇಳಿದರು.ನಂತರ ಮಾತನಾಡಿದ ಸಮಾಜ ಸೇವಕ ರಘು ನಮ್ಮ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಮೀರ್ ಅಹ್ಮದ್ ಅವರ ಸಹಕಾರದೊಂದಿಗೆ ಈ ದಿನ ಅನೇಕ ವರ್ಷಗಳ ಕನಸು ನನಸಾಗಿದೆ.ಇದೇ ರೀತಿ ಗ್ರಾಮದಲ್ಲಿ ಎಲ್ಲಾ ಯುವಕರು ಸಹಕರಿಸಿದರೆ ಇನ್ನು ಉತ್ತಮ ರೀತಿಯಲ್ಲಿ ಗ್ರಾಮವನ್ನು ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಉದ್ಯಾನವನ ನಿರ್ಮಿಸಲು ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಪೆÇ್ರಫೆಸರ್ ಲಾ.ನ.ಸ್ವಾಮಿ,ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್,ಡಾ.ಸಾಗರ್,ಎ.ಸಿ ಮಂಜೇಗೌಡ,ಅಣ್ಣಯ್ಯ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.