ಸುಳ್ವಾಡಿ: ಸಂತ ರೊಕ್ ಹಬ್ಬ
ಸಂಜೆವಾಣಿ ವಾರ್ತೆ
ಹನೂರು ಆ 17 :- ತಾಲ್ಲೂಕಿನ ಸುಳ್ವಾಡಿ ಸಂತ ರೊಕ್ ಹಬ್ಬ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಆಡಂಬರದ ದಿವ್ಯ ಬಳಿಪೂಜೆ ವಂ.ಸ್ವಾಮಿ ಟೆನ್ನಿ ಕುರಿಯನ್ ರವರಿಂದ ನೆರವೇರಿಸಲಾಯಿತು.
ರಾತ್ರಿ ಶೃಂಗರಿಸಲ್ಪಟ್ಟ ಸಂತರ ವೈಭವದ ತೇರಿನ ಮೇಣದ ಬತ್ತಿ ಮೆರವಣಿಗೆ ಮಾಡುವ ಮೂಲಕ ಕ್ರೈಸ್ತರು ಸಂಭ್ರಮಿಸಿದರು.
ಈ ವೇಳೆ ಭಕ್ತಾದಿಗಳು ಪ್ರಾರ್ಥನೆ ಹಾಗೂ ಸ್ತುತಿಗೀತೆಗಳನ್ನು ಹಾಡಿದರು.ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಕ್ರೈಸ್ತರು ಮೇಣದ ಬತ್ತಿಯನ್ನು ಹಿಡಿದುಕೊಂಡು ಸಾಗಿದರು.ಧರ್ಮ ಕೇಂದ್ರದ ಗುರುಗಳಾದ ಫಾಧರ್ ಟೆನ್ನಿ ಕುರಿಯನ್ ಹಾಗೂ ಇನ್ನಿತರ ಗುರುಗಳು ಉಪಸ್ಥಿತರಿದ್ದರು.