ಪಿಎಲ್‍ಡಿ ಬ್ಯಾಂಕ್‍ನಲ್ಲಿ ಸ್ವಾತಂತ್ರ್ಯ ದಿನಾಚರಣೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ. 17- ನಗರದ ರಥದ ಬೀದಿಯಲ್ಲಿರುವ ಪಿಎಲ್‍ಡಿ ಬ್ಯಾಂಕ್‍ನಲ್ಲಿ ನಡೆದ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಬ್ಯಾಂಕಿನ ಅಧ್ಯಕ್ಷ ಎನ್‍ರಿಚ್ ಮಹದೇವಸ್ವಾಮಿ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ಯ ಬಂದು 78 ವರ್ಷಗಳಾಗಿದ್ದು, ಪ್ರತಿ ವರ್ಷ ಆÀ. 15 ರಂದು ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಮಹನೀಯರ ಸೇವೆಯನ್ನು ಗುಣಗಾನ ಮಾಡುವುದು. ಅವರ ತತ್ವ ಅದರ್ಶವನ್ನು ಮೈಗೂಡಿಸಿಕೊಂಡು ಭಾರತದ ಅಭಿವೃದ್ದಿಯಲ್ಲಿ ಎಲ್ಲರು ಸಮಾನರಾಗಿ ಹೆಜ್ಜೆ ಹಾಕೋಣ ಎಂದರು.
ಹಿರಿಯರು ನಮಗೆ ನೀಡಿರುವ ಸ್ವಾತಂತ್ರವನ್ನು ಜೋಪಾನ ಮಾಡುವ ಜೊತೆಗೆ ದೇಶದ ಅಭಿವೃದ್ದಿಯಲ್ಲಿ ಸಹಕಾರ ಕ್ಷೇತ್ರದ ಪಾಲು ಬಹಳಷ್ಟಿದೇ. ಈ ನಿಟ್ಟಿನಲ್ಲಿ ನಾವುಗಳು ಸಹ ಪಾಲುದಾರರಾಗೋಣ. ದೇಶದ ಅಭಿವೃದ್ದಿಯಿಂದ ಮಾತ್ರ ನಮ್ಮೆಲ್ಲರ ಪ್ರಗತಿ, ದೇಶದ ಭದ್ರತೆ ಮತ್ತು ಸುರಕ್ಷತೆ, ಉತ್ತಮ ಆಡಳಿತವೇ ನಮ್ಮೆಲ್ಲರ ಅಭಿವೃದ್ದಿ ಎಂಬುದನ್ನು ಮನಗಂಡು ದೇಶವನ್ನು ಕಟ್ಟುವ ಕೆಲಸದಲ್ಲಿ ಎಲ್ಲರು ಭಾಗಿಯಾಗೋಣ. ಪ್ರದಾನಿ ನರೇಂದ್ರ ಮೋದಿ ಅವರು ಸುಭದ್ರತಾ ಆಡಳಿತಕ್ಕೆ ನಮ್ಮ ಬೆಂಬಲ ಘೋಷಣೆ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಂ. ಬಸವಣ್ಣ, ನಿರ್ದೇಶಕರಾದ ನಲ್ಲೂರು ಮಹದೇವಪ್ಪ, ಶಿವಪುರ ಎಸ್.ರಾಜು, ಬದನಗುಪ್ಪೆ ಬಸವರಾಜು, ದೊರೆಸ್ವಾಮಿ, ವ್ಯವಸ್ಥಾಪಕ ಸತೀಶ್ ನೌಕರರಾದ ಶಶಿಕಿರಣ್, ನವೀನ್, ದಿನಕರ್ ಇತರರು ಇದ್ದರು.