ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದಾಗಿ ಸ್ವಾತಂತ್ರ್ಯ ಲಭಿಸಿದೆ: ಪಿ.ಮರಿಸ್ವಾಮಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.17- ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದಾಗಿ ಸ್ವಾತಂತ್ರ್ಯ ಲಭಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ತಿಳಿಸಿದರು.
ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 78ನೇ ವರ್ಷದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಕಛೇರಿ ಮುಂಭಾಗ ರಾಷ್ಟ್ರ ಧ್ವಜಾರೋಹಣ ಮಾಡಿ ನಂತರ ಮಾತನಾಡಿ, ನಮ್ಮ ದೇಶಕ್ಕೆ ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದಾಗಿ ಸ್ವಾತಂತ್ರ್ಯ ಲಭಿಸಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ನಾವೆಲ್ಲರು ಶ್ರಮಿಸೋಣ. ದೇಶಭಕ್ತಿ ಹಾಗೂ ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಂಡ ಶುಭ ದಿನವಾಗಿದೆ. ಸುಮಾರು ವರ್ಷಗಳ ಹೋರಾಟದ ಫಲದಿಂದಾಗಿ ಆಹಿಂಸಾ ಮಾರ್ಗವಾಗಿ ಪಡೆದುಕೊಂಡ ಸ್ವಾತಂತ್ರ್ಯವಾಗಿದೆ. ಪ್ರತಿಯೊಬ್ಬ ಭಾರತೀಯರು ಸಹ ಹೆಮ್ಮೆಯಿಂದ ಸಂಭ್ರಮ ಪಡುವ ದಿನವಾಗಿದ್ದು, ಸ್ವಾತಂತ್ರಕ್ಕಾಗಿ ರಚನೆಗೊಂಡ ಪಕ್ಷ ಕಾಂಗ್ರೆಸ್, ಸ್ವಾತಂತ್ರ್ಯಕ್ಕಾಗಿ ಮುಂಚೂಣಿಯಲ್ಲಿತ್ತು. ದೇಶಕ್ಕಾಗಿ ಸಮರ್ಪಣೆ ಮಾಡಿಕೊಂಡ ಕಾಂಗ್ರೆಸ್ ಪಕ್ಷ ಹಾಗೂ ಆ ಪಕ್ಷದ ಕೊಡುಗೆಯನ್ನು ಗಮನಿಸಿ, ಇಂದಿನ ಯುವ ಪೀಳಿಗೆ ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗಬೇಕು ಎಂದÀು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಬ್ಲಾಕ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಹೊಂಗನೂರು ಚಂದ್ರು, ಪು. ಶ್ರೀನಿವಾಸನಾಯಕ, ತಾ.ಪಂ. ಮಾಜಿ ಸದಸ್ಯ ಎಸ್.ರಾಜು, ಪ್ರಕಾಶ್, ನಾಗವಳ್ಳಿ ನಾಗಯ್ಯ, ಕಾಗಲವಾಡಿ ಚಂದ್ರು, ರಾಜೇಂದ್ರ ಪ್ರಸಾದ್, ಆಯುಬ್ ಖಾನ್, ಕರಿನಂಜನಪುರ ಸ್ವಾಮಿ, ಹೊಂಗನೂರು ಜಯರಾಜ್, ಚುಡಾ ಮಾಜಿ ಅಧ್ಯಕ್ಷ ಸುಹೇಲ್ ಆಲಿಖಾನ್, ಎ.ಎಚ್.ಎನ್. ಖಾನ್, ಅಪ್ಜಲ್ ಷರೀಪ್, ಶಿವಮರ್ತಿ, ಕಾವೇರಿ ಶಿವಕುಮಾರ್, ಎಎಚ್‍ಎನ್ ಖಾನ್, ನಾಗರಾರ್ಜುನ ಪ್ರಥ್ವಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ನೀಲಮ್ಮ ಇತರರು ಇದ್ದರು.