ಸಮೃದ್ಧ ಭಾರತ ನಿರ್ಮಾಣಕ್ಕೆ ಎಲ್ಲರ ಶ್ರಮ ಅಗತ್ಯ
ಚಿತ್ತಾಪುರ:ಆ.16:ಪ್ರತಿಯೊಬ್ವರು ಶ್ರಮಪಟ್ಟಾಗ ಮಾತ್ರ ಸಮೃದ್ಧ ಭಾರತ ನಿರ್ಮಾಣವಾಗುತ್ತದೆ ಎಂದು ತಹಸೀಲ್ದಾರ್ ಅಮರೇಶ ಬಿರಾದಾರ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತವತಿಯಿಂದ ಗುರುವಾರ ಹಮ್ಮಿಕೊಂಡ ಸ್ವಾತಂತ್ರ್ಯ ದಿನಾಚಾರಣೆ ನಿಮಿತ್ತ ದ್ವಜಾರೋಹಣ ನೆರವೇರಿಸಿ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕøತೀಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಸ್ವಾರ್ಥ ಬಿಟ್ಟು ದೇಶದ ಏಳ್ಗೆಗೆಗೆ ಪ್ರರಿಯೊಬ್ಬರು ಶ್ರಮಿಸಬೇಕೆಂದರು.
ದೇಶದ ಅಭಿಮಾನದ ಬಗ್ಗೆ ಹಾಗೂ ಮಕ್ಕಳ ಭವಿಷ್ಯಕ್ಕೆ ಅನಕೂಲವಾಗುವಂತಹ ಸಿದ್ದಾಂತಗಳು, ವೈಜ್ಞಾನಿಕ ಮನೋಭಾವನೆಗಳು ನೀಡಬೇಕೆಂದು ಹೇಳಿದರು.
ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಸಿಪಿಐ ಚಂದ್ರಶೇಖರ ತಿಗಡಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೋಂಡಗಿ, ಬಿಇಓ ಶಶಿಧರ ಬಿರಾದಾರ್, ಪಶು ಇಲಾಖೆ ಸಹಾಯಕ ನಿರ್ಧೇಶಕ ಡಾ. ಶಂಕರ ಕಣ್ಣಿ ಮಾತನಾಡಿದರು.
ಪಿಎಸ್‍ಐ ಶ್ರೀಶೈಲ್ ಅಂಬಾಟಿ ನೇತೃತ್ವದಲ್ಲಿ ಪೋಲಿಸರು ಕವಾಯತು ಪ್ರದರ್ಶನ ನಡೆಸಿದರು. ಶಾಲಾ ಮಕ್ಕಳಿಂದ ಸಾಂಸ್ಕøತೀಕ ಕಾರ್ಯಕ್ರಮ ಜರುಗಿದವು.
ಸಾಧಕರಾದ ರವಿಶಂಕರ ಬುರ್ಲಿ, ಸಿದ್ದಲಿಂಗಯ್ಯಸ್ವಾಮಿ ಕೋಡಗಿಮಠ, ಆನಂದಮ್ಮ ಅಚ್ಚೋಲಿ, ಶಶಾಂಕ, ಬೀರಪ್ಪ ಭಾಸಗಿ, ಸಂಗಣ್ಣಗೌಡ ಬಿರಾದಾರ, ರಮೇಶ ಮಠದ ಅವರಿಗೆ ಸೇರಿದಂತೆ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್ ನೀಡಿ ಗೌರವಿಸಲಾಯಿತು.
ತಾಲೂಕು ಅಧಿಕಾರಿಗಳಾದ ಸಂಜೀವಕುಮಾರ ಮಾನಕಾರ, ಪಂಡಿತ ಸಿಂಧೆ, ಸುಧೀಂದ್ರ ಕುಲಕರ್ಣಿ, ವಿಜಯಕುಮಾರ ಬಡಿಗೇರ, ಚೇತನ ಗುರಿಕಾರ, ಮಲ್ಲಿಕಾರ್ಜುನ ಸೇಡಂ,
ಅಶ್ವಥನಾರಾಯಣ ಕುಲಕರ್ಣಿ, ಸುನೀಲ್ ಯನಗುಂಟಿಕರ್, ನಾಗರಾಜ, ಪ್ರಮುಖರಾದ ಭೀಮಣ್ಣ ಸಾಲಿ, ಪಾಶಾಮಿಯ್ಯ ಖುರೈಷಿ, ಮಲ್ಲಿಕಾರ್ಜುನ ಕಾಳಗಿ, ರಾಜಣ್ಣ ಕರದಾಳ ಸೇರಿದಂತೆ ಇನ್ನಿತರರಿದ್ದರು.
ಮಧುಸೂಧನ ಘಾಳೆ ಸ್ವಾಗತಿಸಿದರು. ಸಂತೋಷಕುಮಾರ ಶಿರನಾಳ ನಿರೂಪಣೆ ಮಾಡಿದರು. ಲಕ್ಷ್ಮೀನಾರಾಯಣ ವಂದಿಸಿದರು.