ಆಶ್ಲೇಷ ಮಳೆಗೆ ಬೋರ್ಗರೆದ ಹಳ್ಳಕೊಳ್ಳ ಭಾಗಶಃ ತುಂಬಿ ಮನೆ, ರೈತರ ಬೆಳೆ ಹಾನಿ
ಸಂಜೆವಾಣಿ ವಾರ್ತೆ
ಜಗಳೂರು.ಆ.೧೬ :- ಕಳೆದ ಎರಡು ವರ್ಷಗಳಿಂದ ಎಂದೆಂದೂ ಸುರಿಯದ ಮಳೆ,ತಾಲೂಕಿನಾದ್ಯಂತ ಬೆಳಗಿನಜಾವ 3ಗಂಟೆ ಯಿಂದ 6ಗಂಟೆಯವರೆಗೂ ಮಿಂಚು,ಗುಡುಗು ಸಮೇತ ಸುರಿದ ಭಾರೀಮಳೆಯಿಂದಾಗಿ ಹಳ್ಳಕೊಳ್ಳ,ಕೆರೆಕಟ್ಟೆಗಳಲ್ಲಿ ನೀರು ಬೋರ್ಗರೆಯುತ್ತಿವೆ. ತಾಲೂಕಿನ ವಿವಿದೆಡೆ ಮನೆ,ಬೆಳೆ ಹಾನಿಗೊಳಗಾಗಿವೆ.ಕಳೆದ ವರ್ಷದಿಂದ ಸಕಾಲದಲ್ಲಿ ಮಳೆಯಿಲ್ಲದೆ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಿಂದಾಗಿ ಬರದಛಾಯೆಗೆ ಸಿಲುಕಿ ನಲುಗಿಹೋಗಿದ್ದ ರೈತಾಪಿವರ್ಗಕ್ಕೆ ದೊಡ್ಡಪ್ರಮಾಣದ ಮಳೆ ಆಶ್ಲೇಷಮಳೆ ಎಡಬಿಡದೆ ಸುರಿದಿದ್ದು.ತಾಲೂಕಿನ ಹಳ್ಳ ಕೊಳ್ಳ, ಕೆರೆಕಟ್ಟೆ ಭರ್ತಿಯಾಗಿ ಬೋರ್ಗರೆಯುತ್ತಿವೆ.ರಾತ್ರಿ ಸುರಿದ 72.22 ಮಿ.ಮೀ ಮಳೆಯ ಪ್ರಮಾಣದಿಂದ ಪಟ್ಟಣದ ಹೊರಹೊಲಯ ಸೇರಿದಂತೆ ತಾಲೂಕಿನ ಉದ್ಗಟ್ಟ, ಸಿದ್ದಮ್ಮನಹಳ್ಳಿ,ಚಿಕ್ಕಮಲ್ಲನಹೊಳೆ,ಸೇರಿದಂತೆ ವಿವಿಧ ಗ್ರಾಮ ಗಳಲ್ಲಿ 17 ಮನೆಗಳು ಕುಸಿತಗೊಂಡು ಭಾಗಶಃ ಹಾನಿಗೊಳ ಗಾಗಿವೆ.ಅಂತೆಯೇ 65 ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ಜಲಾವೃತಗೊಂಡು ಭಾಗಶಃ ಬೆಳೆಹಾನಿಗೊಳಗಾಗಿವೆ. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಮತ್ತು ಪ್ರಾಣಿಗಳು ಹಾನಿಗೊಳಗಾಗಿಲ್ಲ.ರಾತ್ರಿ ಸುರಿದ ಭಾರೀಪ್ರಮಾಣದ ಮಳೆಗೆ ಹಳ್ಳಕೊಳ್ಳ,ಚೆಕ್ ಡ್ಯಾಂ, ಗಳು ಭರ್ತಿಯಾಗಿ ಮೈದುಂಬಿ ಹರಿಯುತ್ತಿದ್ದು.57ಕೆರೆತುಂಬಿ ಸುವ ಯೋಜನೆಯಡಿ ಪೈಪ್ ಲೈನ್ ನಲ್ಲಿ ಶೇ.30ರಷ್ಟು ಕೆರೆಗಳಿಗೆ ಪ್ರಾಯೋಗಿಕವಾಗಿ ಭದ್ರೆ ಹರಿದರೆ.ಇನ್ನು ಸುರಿದ ಭಾರೀ ಮಳೆಯಿಂದ ಕೆರೆಗಳಿಗೆ ಬಹುತೇಕ ಪ್ರಮಾಣ ನೀರು ಸಂಗ್ರಹವಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತಾಲೂಕಿನ ಗಿಡ್ಡನಕಟ್ಟೆ,ದೊಡ್ಡಬೊಮ್ಮನಹಳ್ಳಿ, ಸೇರಿದಂತೆ ಕೆಲ ರಸ್ತೆಮಾರ್ಗಳಲ್ಲಿ ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸುಗಮ ರಸ್ತೆಸಂಚಾರ ಅಸ್ತವ್ಯಸ್ತಗೊಂಡಿದೆ’. ಪಟ್ಟಣದ ಜೆ.ಸಿ.ಆರ್ ಬಡಾವಣೆ,ಅಬ್ದುಲ್ ಲತೀಫ್ ಸಾಹೇಬ್, ಲೋಕೇಶ್  ರೆಡ್ಡಿ  ಬಡಾವಣೆ, ತುಮಾಟಿ,ಬೈಪಾಸ್ ರಸ್ತೆ, ದೇವೇಗೌಡ ಬಡಾವಣೆ,ಸೇರಿದಂತೆ ರುದ್ರನರ್ತನಕ್ಕೆಕೆಲ ಗುಡಿಸಲು,ಮನೆಗಳಿಗೆ ನೀರು ನುಗ್ಗಿವೆ ಹಾಗೂ ರಸ್ತೆಗಳಲ್ಲಿ ಕೆಸರುಮಯವಾಗಿದ್ದು.ವರುಣನ ರುದ್ರನರ್ತನಕ್ಕೆ ಪಟ್ಟಣದಲ್ಲಿ ತಲ್ಲಣಮೂಡಿಸಿದೆ .