ಶ್ರೀರಾಮ ಬಡಾವಣೆ ರಸ್ತೆಯ ಸಮಸ್ಯೆಯ ಸ್ಥಳ ಪರಿಶೀಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೬: ನಗರದ ಶ್ರೀರಾಮ ಬಡಾವಣೆ ಹಾಗೂ ಭೀಮ ಬುದ್ಧ ಬಸವ ನಗರದಲ್ಲಿನ ಕೆಲವು ವರ್ಷಗಳಿಂದ ರೋಡಿನ ಸಮಸ್ಯೆ ಇದ್ದು ಅಲ್ಲಿಗೆ  ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ಸ್ಥಳ ಪರಿಶೀಲನೆ ಮಾಡಿ ಅಲ್ಲಿನ ಜನಸಾಮಾನ್ಯರು ಹಾಗೂ ಸ್ಥಳದ ನಡೆಸಿ ಮಾಲೀಕರೊಂದಿಗೆ ಚರ್ಚೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ  ಮಾರ್ಗದರ್ಶನದ ಮೇರೆಗೆ  ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ಪ್ರಾಧಿಕಾರದ ಆಯುಕ್ತರಾದ ಹುಲ್ಲುಮನೆ ತಿಮ್ಮೆಶ್ ಅವರಿಗೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಆರ್ ಎಚ್ ನಾಗಭೂಷಣ್ ಹಾಗೂ  ದೂಡ ಇಂಜಿನಿಯರ್‌ ಗಳು ಸಾರ್ವಜನಿಕರು ಉಪಸ್ಥಿತರಿದ್ದರು