ಬೆಡ್‍ರೂಮ್ ಬೀಗ ಮುರಿದು 1.25 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು
ಕಲಬುರಗಿ,ಆ.16-ಬೆಡ್‍ರೂಮ್ ಬೀಗ ಮುರಿದು 1.25 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಅಜಾದಪುರ ರಸ್ತೆಯ ಗರೀಬ್ ನವಾಸ್ ಕಾಲೋನಿಯಲ್ಲಿ ನಡೆದಿದೆ.
ಸೈಯದ್ ನದೀಮ್ ಎಂಬುವವರ ಮನೆಯ ಬೆಡ್‍ರೂಮ್ ಬೀಗ ಮುರಿದು 90 ಸಾವಿರ ರೂ.ಮೌಲ್ಯದ 15 ಗ್ರಾಂ.ಬಂಗಾರದ ನೆಕ್ಲೆಸ್, 32 ಸಾವಿರ ರೂ.ನಗದು, 3 ಸಾವಿರ ರೂ.ಮೌಲ್ಯದ 6 ತೊಲೆಯ ಬೆಳ್ಳಿ ಕಾಲು ಚೈನಾ ಸೇರಿ 1.25 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಕೌಟುಂಬಿಕ ಸಮಸ್ಯೆಯಿಂದ ನೊಂದು ಮಾತ್ರೆ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಕ್ಕಮಹಾದೇವಿ ಕಾಲೋನಿಯಲ್ಲಿ ನಡೆದಿದೆ.
ರಾಹುಲ್ ತಂದೆ ರಾಜಶೇಖರ ಅರಳಾ (30) ಎಂಬುವವರೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.