ಜೂಜಾಟ: 9 ಜನರ ಬಂಧನ
ಕಲಬುರಗಿ,ಆ.16-ನಗರದ ಶಹಾಬಜಾರ್ ಟೆಂಗಿನಗಲ್ಲಿಯಲ್ಲಿ ಜೂಜಾಟವಾಡುತ್ತಿದ್ದ 9 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ದಿಲೀಪ್ ಕುಮಾರ್ ಬಿ.ಸಾಗರ್ ನೇತೃತ್ವದಲ್ಲಿ ಪಿಎಸ್‍ಐ ಶಶಿಕುಮಾರ, ಸಿಬ್ಬಂದಿಗಳಾದ ರಾಜಕುಮಾರ, ಸುನೀಲಕುಮಾರ ಅವರು ದಾಳಿ ನಡೆಸಿ ಶರಣಯ್ಯ ಹಿರೇಮಠ (24), ಬಲರಾಮ ಠಾಕೂರ (23), ನಾಗರಾಜ ಗಡೂರ (44), ಅಭಿಶೇಖ ಖೇಮಜಿ (25), ಗಣೇಶ ಸಿರಸಗಿ (28), ಸಾಯಿಯಣ್ಣ ಸಗರ (41), ಗಂಗಾಧರ ಪಾಟೀಲ (51), ದಿಲೀಪ್ ಕುಮಾರ್ ಮಂಜೂಳಕರ್ (28), ಆಕಾಶ ಬೆಳಮಗಿ (27) ಎಂಬುವವರನ್ನು ಬಂಧಿಸಿ 9,670 ರೂ.ನಗದು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.