ನಗರದಲ್ಲಿ ವಿಜೃಂಭಣೆಯ ವರಮಹಾಲಕ್ಷ್ಮಿ ಹಬ್ಬ ಆಚರಣೆ
ಕಲಬುರಗಿ ಆ.16: ಶ್ರಾವಣ ಮಾಸದ 2 ನೆಯ ಶುಕ್ರವಾರ ದಿನವಾದ ಇಂದು ವರಮಹಾಲಕ್ಷ್ಮಿ ಹಬ್ಬವನ್ನು ಕಲಬುರಗಿ ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ನಗರದ ಸವಿತಾ ಗುತ್ತೇದಾರ ಅವರ ಮನೆಯಲ್ಲಿ ನಡೆದ ವಿಶೇಷಪೂಜೆಯಲ್ಲಿ ಅನೇಕ ಮಹಿಳೆಯರು ಕುಟುಂಬದ ಸದಸ್ಯರು ವರಮಹಾಲಕ್ಷ್ಮೀಯನ್ನು ಭಕ್ತಿಭಾವದಿಂದ ಪೂಜಿಸಿದರು.
ಮಹಾಲಕ್ಷ್ಮಿ ದೇವಿಯನ್ನು ಮಂಟಪದಲ್ಲಿ ಪ್ರತಿಷ್ಠಾಪಿಸಿ, ಸೀರೆ ಉಡಿಸಿ, ಕಳಶವಿಟ್ಟು, ವಿವಿಧ ರೀತಿಯ ಹೂವು, ವಸ್ತ್ರ, ಒಡವೆಗಳಿಂದ ಅಲಂಕರಿಸಿ ಹಣ್ಣುಗಳನ್ನು ನೈವೇದ್ಯ ಮಾಡಿ ವಿವಿಧ ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ದೇವಿಗೆ ನೈವೇದ್ಯ ಮಾಡಿ ಆರುತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
ಇನ್ನೂ ಕೆಲವೆಡೆ ಇಂದು ಸಂಜೆ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿ ಮಹಿಳೆಯರಿಗೆ ಅರಿಶಿನಕುಂಕುಮ ನೀಡಿ ಉಡಿ ತುಂಬುವ ಪದ್ಧತಿ ಇದೆ.