ಬಸವೇಶ್ವರ ಆಸ್ಪತ್ರೆಯಲ್ಲಿ ಅತಿಸೂಕ್ಷ್ಮ ನೇತ್ರ ಶಸ್ತ್ರಚಿಕಿತ್ಸೆ ಯಶಸ್ವಿ
ಕಲಬುರಗಿ,ಆ 16: ನಗರದ ಎಚ್‍ಕೆಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ನೇತ್ರ ತಜ್ಞ ವೈದ್ಯರಾದ ಡಾ.ನಾಗವೇಣಿ ಗುಬ್ಬೇವಾಡ ಅವರು ಬಾಲಕಿಯೊಬ್ಬಳಿಗೆ ಅತಿಸೂಕ್ಷ್ಮ ರೀತಿಯ ನೇತ್ರ ಶಸ್ತ್ರಚಿಕಿತ್ಸೆ ಕೈಗೊಂಡು ಯಶಸ್ವಿಯಾಗಿದ್ದಾರೆ.
ನಾಯಿ ಕಡಿತದಿಂದ ತೀವ್ರವಾಗಿ ಕಣ್ಣಿಗೆ ಗಾಯವಾಗಿ ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಶಹಾಬಾದ್ ನಗರದ ಬಡ ಕುಟುಂಬದ 7 ವರ್ಷದ ಬಾಲಕಿ ದೀಪಾಲಿ ಕಲಬುರ್ಗಿ ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಾಳೆ. ದಾಖಲಾದ ಬಾಲಕಿಯನ್ನು ಆಸ್ಪತ್ರೆಯ ತಜ್ಞ ನೇತ್ರ ವೈದ್ಯರಾದ ಡಾ ನಾಗವೇಣಿ ಗುಬ್ಬೇವಾಡರವರು ಪರೀಕ್ಷಿಸಿ ತೀವ್ರವಾಗಿಗಾಯಗೊಂಡು ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಆ ಬಾಲಕಿಯ ಕಣ್ಣಿಗೆ ಯಾವುದೇತೊಂದರೆಯಾಗಬಾರದು ಎಂದು ನಿರ್ಧರಿಸಿ ಅತ್ಯಂತ ಸೂಕ್ಷ್ಮ ರೀತಿಯ ಶಸ್ತ್ರಚಿಕಿತ್ಸೆ ಮುಂದಾಗಿ ಚಿಕಿತ್ಸೆ ಆರಂಭಿಸಿ ಯಶಸ್ವಿ
ಶಸ್ತ್ರಚಿಕಿತ್ಸೆ ನೀಡಿ ಸಂಸ್ಥೆಯ ಮೆಚ್ಚುಗೆಗಳಿಸಿದ್ದಾರೆ. ಇವರ ಕಾರ್ಯಕ್ಕೆ ಬಾಲಕಿಯ ತಂದೆ ತಾಯಿ ಅತ್ಯಂತ ಖುಷಿಯಿಂದ ವೈದ್ಯರನ್ನು ಹಾರೈಸಿದ್ದಾರೆ
ಇವರ ಯಶಸ್ವಿ ಶಸ್ತ್ರಚಿಕಿತ್ಸೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ,ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿಕಾರ್ಯದರ್ಶಿ ಡಾ ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಡೀನ್ ಡಾ ಶರಣಗೌಡ ಪಾಟೀಲ್‍ಶ್ಲಾಘಿಸಿದ್ದಾರೆ.ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಶರಣಬಸಪ್ಪ ಅವಂತಿಯವರು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಇಳಿವಯಸ್ಸಿನವರೆಗೆ ಕಣ್ಣು ಮತ್ತು ಕಣ್ಣಿಗೆ ಸಂಬಂಧಿಸಿದ ಸಣ್ಣ ಪುಟ್ಟ ಗಾಯ, ತೀವ್ರ ಗಾಯ,ಸುಟ್ಟಗಾಯ,ನಾಯಿಯಂತ ಪ್ರಾಣಿಗಳಿಂದಾದ ಕಡಿತದಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗದಂತೆ ಸೂಕ್ಷ್ಮ ಜೀವಿರಹಿತ (ಸೂಕ್ಷ್ಮ ಜೀವಿಗಳಿಂದ ಮುಕ್ತವಾದ) ಗಳನ್ನೊಳಗೊಂಡ ಆಧುನಿಕ ಸಾಕ್ಷಿ ಆಧಾರಿತ ಶಸ್ತ್ರಚಿಕಿತ್ಸೆ ಗಳನ್ನು ಡಾ ರೇಣುಕಾ ಗುಬ್ಬೆವಾಡ ಸತತವಾಗಿ ಸೇವೆ ನೀಡುತ್ತಾ ಬಂದಿದ್ದಾರೆ. ಇಂತಹ ಸೂಕ್ಷ್ಮ ರೀತಿಯ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಬಸವೇಶ್ವರ ಆಸ್ಪತ್ರೆಯ ಮುಂಚೂಣಿಯಲ್ಲಿ ಇದೆ ಎಂದು ಹೇಳಿದ್ದಾರೆ