20ರಂದು ಬ್ರಹ್ಮಶ್ರೀ ನಾರಾಯಣ ಗುರೂಜಿ ಹಾಗೂ ದೇವರಾಜ ಅರಸು ಜಯಂತಿ ಸರಳ ಆಚರಣೆ: ಡಾ.ಸೇಡಂಕರ್
ಬೀದರ:ಆ.16: ಈ ತಿಂಗಳ 20ರಂದು ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆರ್ಯ ಈಡೀಗ ಸಮಾಜ ಹಾಗೂ ಹಿಂದುಳಿದ ವರ್ಗದವರಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಅವರ ಜಯಂತಿ ಕಾರ್ಯಕ್ತಮಗಳನ್ನು ಸರಳವಾಗಿ ಆಚರಿಸಲಾಗುವುದೆಂದು ಆರ್ಯ ಈಡೀಗ ಸಮಾಜ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷರಾದ ಡಾ.ರಾಜಶೇಖರ ಸೇಡಮಕರ್ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರನಲ್ಲಿ ಭುಕುಸಿತದಿಂದ ನಮ್ಮ ಕುಲಬಾಂಧವರು ಪ್ರಾಣ ಕಳೆದುಕೊಂಡಿದ್ದು ಅದರ ಪ್ರಯುಕ್ತ ಯಾವುದೇ ರಥಯಾತ್ರೆ, ಮೆರವಣಿಗೆ ಮಾಡದೇ ನೇರವಾಗಿ ಅಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಯಿಂದಲೇ ಮಹಾಪ್ರಸಾದ ಎರ್ಪಡಿಸಲಾಗುತ್ತದೆ. ಈ ಎರಡು ಸಮಾಜಗಳ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಶ್ವಿಗೊಳಿಸಬೇಕೆಂದು ತಿಳಿಸಿದರು.
ಹಿಂದುಳಿದ ವರ್ಗಗಳ ಮುಖಂಡರಾದ ಬಸವರಾಜ ಮಾಳಗೆ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ದೇವರಾಜ ಅರಸ್ ಅವರ ವಿಚಾರ ಧಾರೆ ಒಂದೆ ಆಗಿರುವುದರಿಂದ ಇಬ್ಬರ ಜಯಂತಿಗಳನ್ನು ಒಂದೆ ವೇದಿಕೆಯಲ್ಲಿ ಆಚಿರಸಬೇಕೆಂದು ನಿರ್ಧರಿಸಲಾಗಿದೆ. ಆದ ಕಾರಣ ಹಿಂದುಳಿದ ವರ್ಗದವರ ಏಳಿಗೆಗೆ ರೂಪರೇಷ ಸಿದ್ದಪಡಿಸಿದ್ದ ಅರಸು ಅವರ ಜಯಂತಿ ಮತ್ತು ಎಲ್ಲ ಧರ್ಮದವರನ್ನು ಒಂದೆ ಎಂದು ಸಾರಿದ ಸಂತ ನಾರಾಯಣಗುರುಗಳ ಜಯಂತಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮನ್ನಾನ್ ಸೇಠ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದು, ಮುಸಲ್ಮಾನ, ಸಿಖ್, ಬೌದ್ದ, ಹಾಗೂ ಜೈನ್ ಎನ್ನದೆ ಎಲ್ಲರನ್ನು ಪ್ರೀತಿಸಿದ ಮಹಾನ ದಾರ್ಶನಿಕ. ಅವರ ಜಯಂತಿ ಆಚರಣೆ ಅರಸರ ಜಯಂತಿಯೊಂದಿಗೆ ಸೇರಿ ಆಚರಿಸಿದರೆ ಸಮಾಜಕ್ಕೆ ಒಳ್ಳೆ ಸಂದೇಶ ರವಾನೆಯಾಗಲಿದೆ ಎಂದರು.
ಆರ್ಯ ಈಡೀಗ ಸಮಾಜದ ಮುಖಂಡರಾದ ಸುಭಾಷ ಚೌದ್ರಿ, ಸಂಗಯ್ಯ ಇಸ್ಲಾಂಪುರ, ಅಶೋಕ ತೇಲಂಗ, ಚಂದ್ರಶೇಖರ ಗೌಡ, ಆನಂದ ಗೌಡ, ಅನಿಲ ಗೌಡ, ಶಂಕರರಾವ ನೇಳಗಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.