ಸ್ವಾತಂತ್ರ್ಯದ ಜ್ಯೋತಿ ಹೊತ್ತಿಸಿದ ಸಂಗೋಳ್ಳಿ ರಾಯಣ್ಣನ ಮರೆಯುವಂತಿಲ್ಲ
ಕಲಬುರಗಿ:ಆ.16:ಭಾರತ ಸ್ವಾತಂತ್ರ್ಯ ಚಳುವಳಿ ಇತಿಹಾಸದ ಪುಟಗಳಲ್ಲಿ ಅತ್ಯಂತ ಪ್ರಮುಖವಾಗಿದೆ. ಅದರಲ್ಲಿ ಅನೇಕ ಹೋರಾಟಗಾರರು ಭಾಗವಹಿಸಿ ತಮ್ಮ ಸರ್ವಸ್ವವನ್ನೇತ್ಯಾಗ ಮಾಡಿದ್ದಾರೆ. ವೀರ, ಧೀರ, ಅಪ್ಪಟದೇಶಪ್ರೇಮಿ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರುಬ್ರಿಟಿಷರ ವಿರುದ್ಧ ಸಮರ ಸಾರುವ ಮೂಲಕ ಸ್ವಾತಂತ್ರದಜ್ಯೋತಿ ಹೊತ್ತಿಸಿದ ಮಹಾನ ಚೇತನಅವರಾಗಿದ್ದು, ಕೊಡುಗೆ ಮರೆಯುವಂತಿಲ ್ಲ್ಲಎಂದುಉಪನ್ಯಾಸಕ, ಚಿಂತಕಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂರಾಘವೇಂದ್ರ ಕಾಲನಿಯಲ್ಲಿರುವ ‘ಶ್ರೀ ವಿವೇಕಾನಂದಕೋಚಿಂಗ್ ಸೆಂಟರ್’ನಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ ‘ಸಂಗೊಳ್ಳಿ ರಾಯಣ್ಣನವರಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರುಮಾತನಾಡುತ್ತಿದ್ದರು.
ಕರಾಪ್ರಾಶಾಶಿ ಸಂಘದ ಆಳಂದ ತಾಲೂಕಾಧ್ಯಕ್ಷ ನರಸಪ್ಪಬಿರಾದಾರದೇಗಾಂವ ಮಾತನಾಡಿ, ರಾಯಣ್ಣನವರಮನೆತನವುಕಿತ್ತೂರ ಸಂಸ್ಥಾನದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಸಹ ಭಾಗಿಗಳಾಗಿ ಪ್ರಾಮಾಣಿಕವಾದತಮ್ಮ ನಿಷ್ಟೆ ತೋರಿ ದೊರೆಗಳ, ರಾಣಿಯವರ ಪ್ರೀತಿ ವಿಶ್ವಾಸಕ್ಕೆಗೌರವಕ್ಕೆ ಪಾತ್ರವಾಗಿತ್ತು. ಸಂಸ್ಥಾನದ ಮತ್ತುತಮ್ಮ ಮನೆತನದ ನಡುವಿನ ಅನೋನ್ಯವಾದ ಸಂಭಂಧವನ್ನುತಮ್ಮಜೀವಿತದಕೊನೆಯವರೆಗೂಕಾಯ್ದುಕೊಂಡು ಬಂದಿದ್ದರು. ವಂಶಸ್ಥರುಅಪ್ರತೀಮ ಶೌರ್ಯ, ಸಾಹಸವನ್ನು ಹೊಂದಿದಕುಟುಂಬದವರಾಗಿದ್ದರು. ಇಂತಹ ಮನೆತನದಲ್ಲಿರಾಯಣ್ಣ ಜನಿಸಿದ್ದರಿಂದ, ಹೋರಾಟದ ಮನೋಭಾವಇತನಲ್ಲಿರಕ್ತಗತವಾಗಿಯೇ ಬಂದಿತು. ಮುಂದೆ ಶಿಬಿರದಲ್ಲಿ ಭಾಗವಹಿಸಿ ಇದ್ದದು ಕಲೆ, ಜಾಣ್ಮೆ, ಚಮತ್ಕಾರಕಲೆತನುಎಂದು ಹೇಳಿದರು.
ಸಂಸ್ಥೆಯಅಧ್ಯಕ್ಷ ಬಸವರಾಜ ಮಳ್ಳಿ ಮಾತನಾಡಿ, ರಾಯಣ್ಣನುತನ್ನ ನಾಡು, ರಾಷ್ಟ್ರಕ್ಕಾಗಿತನ್ನಜೀವನವನ್ನೇ ನೀಡಿ, ಬ್ರಿಟೀಷರನ್ನುದೇಶದಿಂದ ಹೊಡೆದೊಡಿಸಬೇಕೆಂದು ಹೋರಾಟ ಮಾಡಿದನು. ರಾಣಿ ಚನ್ನಮ್ಮಳನ್ನು ಬ್ರಿಟೀಷರು ಬಂಧಿಸಿದಾಗ ವ್ಯವಸ್ಥಿತವಾಗಿ ಸೈನ್ಯವನ್ನುಕಟ್ಟಿ ಬ್ರಿಟೀಷರ ವಿರುದ್ಧ ‘ಗೆರಿಲ್ಲಾಯುದ್ಧ’ ಮಾಡಿದನು. ರೈತರಿಗೆಆಗುತ್ತಿದ್ದಕಂದಾಯ ಶೋಷಣೆಯನ್ನುತಪ್ಪಿಸಲು ಪ್ರಯತ್ನಿಸಿದನೆಂದು ನುಡಿದರು.
ಕಾರ್ಯಕ್ರಮದಲ್ಲಿಶಿಕ್ಷಕರಾದ ಸುನಿಲ ಸೊನ್ನ್, ಅಕ್ಷತಾಬಿರಾದಾರ, ಗಣೇಶ, ಕಾವೇರಿ, ದೇವರಾಜ, ತರುಣಾ, ಕಾವ್ಯಶ್ರೀ ಸೇರಿದಂತೆ ಮತ್ತಿತರರಿದ್ದರು.