ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ 78ನೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ
ಕಲಬುರಗಿ:ಆ.16:ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಇಂದು 78ನೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಜಯನಗರ ಶಿವಮಂದಿರ ಆವರಣದಲ್ಲಿ ನಡೆದ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ನಮ್ಮ ದೇಶಕ್ಕೆ ಬ್ರೀಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು.ನಮಗೆ ಸಿಕ್ಕ ಸ್ವಾಂತ್ರ್ಯವನ್ನು ಉತ್ತಮ ಸಮಾಜ ಕಟ್ಟಲು ಮುಂದೆಬರಬೇಕು.ಇಂದಿನ ಯುವಕರಲ್ಲಿ ದೇಶಭಿಮಾನ ಬೆಳೆಸಬೇಕು ಎಂದು ಹೇಳಿದರು.
ಉಪಾಧ್ಯಕ್ಷ ವಿರೇಶ ದಂಡೋತಿ,ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ,ಹಿರಿಯ ಸದಸ್ಯ ಎಂ.ಡಿ.ಮಠಪತಿ,ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ ಮಾತನಾಡಿದರು.ಟ್ರಸ್ಟ್ ಪದಾಧಿಕಾರಿಗಳಾದ ಬಸವರಾಜ ಮಾಗಿ,ಶಿವಕುಮಾರ ಪಾಟೀಲ,ಸಿದ್ಧಲಿಂಗ ಗುಬ್ಬಿ,ಬಂಡಪ್ಪ ಕೇಸೂರ,ಬಸವರಾಜ ಅನ್ವರಕರ,ಭೀಮಾಶಂಕರ ಶೆಟ್ಟಿ,ನಾಗರಾಜ ಖೂಬಾ,ವೀರಪ್ಪ ಹುಡುಗಿ,ಮಲ್ಲಯ್ಯ ಸ್ವಾಮಿ ಗಂಗಾಧರ ಮಠ,ಮನೋಹರ ಬಡಶೇಷಿ,ಶಿವಪುತ್ರಪ್ಪ ಮರಡಿ,ಅಶೋಕ ಪಾಟೀಲ,ಮಲ್ಲಯ್ಯ ಸ್ವಾಮಿ ಬೀದಿಮನಿ,ಮಹಿಳಾ ಸದಸ್ಯೆಯರಾದ ಸುಜಾತಾ ಭೀಮಳ್ಳಿ,ಅನಿತಾ ನವಣಿ,ಸುಷ್ಮಾ ಮಾಗಿ,ಲತಾ ತುಪ್ಪದ,ಗೀತಾ ಹುಡಗಿ, ಸೇರಿದಂತೆ ಅನೇಕರು ಇದ್ದರು.