ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಬೀದರ್:ಆ.16: ನಗರದ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ದಿನಾಂಕ 15 ಅಗಷ್ಟ ರಂದು ಸ್ವಾತಂತ್ರ ದಿವಸವನ್ನು ಪ್ರತಿ ವರ್ಷದಂತೆ ಅತೀ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ನಿರ್ದೇಶಕರಾದ ಡಾ. ರಘು ಕೃಷ್ಣ ಮೂರ್ತಿ ಡಾ. ಶಿಲ್ಪಾ ಬುಳ್ಳಾ, ಹಾವಶೆಟ್ಟಿ ಪಾಟೀಲ, ಕಮಲ್ ಕಿಶೋರ ಅಟ್ಟಲ್ ಹಾಗೂ ಡಾ.ಸಂಗಮೇಶ ಕುಣಿಕೆರೆ, ಭಾಗವಹಿಸಿದ್ದರು. ಈ ವೇಳೆ ಗಾಂಧೀಜಿ, ಅಂಬೇಡ್ಕರ್ ಮತ್ತು ಭಾರತಾಂಬೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ದ್ವಜಾರೋಹಣ ನೆರವೇರಿಸಿದರು. ನಂತರ ಶಾಲೆಯ ಓಅಅ ಕೆಡಿಟ್ಸ್‍ಗಳ ಜೊತೆ ನಾಲ್ಕು ತಂಡಗಳಾದ ಕರಿಯಪ್ಪ, ತಿಮ್ಮಯ್ಯ, ಮಾಣಿಕ್ ಷಾ, ಸುಂದರ್‍ಜಿ ಒಟ್ಟು 250 ಕ್ಕೂ ಹೆಚ್ಚು ಮಕ್ಕಳಿಂದ ಅದ್ಭುತ ಪಥ ಸಂಚಲನವನ್ನು ನಡೆಸಲಾಯಿತು. ಪ್ರಾಸ್ತವಿಕ ನುಡಿ ಹಾಗೂ ಸ್ವಾಗತ ಭಾಷಣವನ್ನು ಶಿಕ್ಷಕರಾದ ಶ್ರೀ ಹರ್ಷವರ್ಧನ್ ನಡೆಸಿಕೊಟ್ಟರು, ಶಿಕ್ಷಕರು ಮತ್ತು ಮಕ್ಕಳು ಭಾಷಣವನ್ನು ನೀಡಿದರು. ಮಕ್ಕಳಿಂದ ದೇಶಭಕ್ತಿ ಗಾಯನ ಹಾಗೂ ಪುಟ್ಟ ಮಕ್ಕಳಿಂದ ನೃತ್ಯ ಅತೀ ಮಧುರವಾಗಿ ಮೂಡಿತು. ಬ್ರಿಟಿಷರಲ್ಲಿ ನಡುಕವನ್ನು ಹುಟ್ಟಿಸುವ ‘ಹಲಗಲಿ ಬೇಡರ’ ಕಿರು ನಾಟಕದ ಜೊತೆ ಜಾನಪದ ನೃತ್ಯ ನೂಡುಗರ ಗಮನ ಸೆಳೆಯಿತು, ಪುಟ್ಟ ಪುಟ್ಟ ಮಕ್ಕಳು ಸ್ವತಂತ್ರ ಹೋರಾಟಗಾರರ ಪೋಷಕುಗಳನ್ನು ಹಾಕಿಕೊಂಡು ಸಂಭ್ರಮಿಸಿದರು, ಶಿಕ್ಷಕರು ಬಾವುಟದ ಮೂರು ಬಣ್ಣಗಳ ಉಡುಪನ್ನು ಧರಿಸಿದ್ದು, ಶಾಲೆ ಮತ್ತು ವೇದಿಕೆಯು ಮೂರು ಬಣ್ಣಗಳಿದ ಅಲಂಕರಿಸಿ ದೇಶ ಭಕ್ತಿಯನ್ನು ಮೆರೆಸಲಾಯಿತು,
“ಈಗಾಗಲೆ ಕರ್ನಾಟಕ ರಾಜ್ಯ ಮಟ್ಟದ ಶೂೀಟಿಂಗ್ ಚಾಂಪಿಯನ್ ಶೀಪ್‍ನಲ್ಲಿ ಗೋಲ್ಡ ಮೆಡಲ್ ತಂದಿರತಕ್ಕಂತ್ ಮಾ.ವಿರೇಶ ಜೂಜಾ ಅವರನ್ನು ಸನ್ಮಾನಿಸಲಾಯಿತು.” ಸಂಗೀತ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಶ್ರೀವರ್ಧನ ಎಕ್ಯಾಳೆ ಅವರಿಗೆ ಸನ್ಮಾನಿಸಿ, ಓಅಅ ಕೆಡಿಟ್ಸ್ ತರೆಬೇತಿ ಪಡೆದ ಮಕ್ಕಳಿಗೆ ಈ ಸಂಧರ್ಭದಲ್ಲಿ ಪ್ರಮಾಣ ಪತ್ರ ವಿತರಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನಪುರೆ ಅವರು ಈ ವರ್ಷ ಯು.ಎಸ್ ಗೆ ತೆರಳಿದ್ದು ಅಲ್ಲಿಂದಲೇ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಮಕ್ಕಳಿಗೆ ಸ್ವಾತಂತ್ರ ದಿವಸದ ಹಾರ್ದಿಕ ಶುಭಾಶಯಗಳು ತಿಳಿಸಿದರು.
ಈ ವೇಳೆ ಡಾ.ರಘು ಕೃಷ್ಣ ಮೂರ್ತಿ ಅವರು ಮಾತನಾಡಿ ಎಲ್ಲರಿಗೂ ಸ್ವಾತಂತ್ರ ದಿವಸದ ಶುಭಾಶಯಗಳನ್ನು ತಿಳಿಸುತ್ತಾ ಮಕ್ಕಳೆ ನಮಗೆಲ್ಲ ಸ್ವತಂತ್ರ ಸಿಗಲು ಅನೇಕರ ತ್ಯಾಗ, ಬಲಿದಾನವಿದೆ. ನೀವೆಲ್ಲರೂ ನಮ್ಮ ಭವ್ಯ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಮುಖ್ಯ ಗುರುಗಳಾದ ಜ್ಯೋತಿ ರಾಗಾ, ಡಾ. ಮನಿಷಾ, ಸುಬೇದಾರ್ ಮಡೇಪ್ಪ, ಸುಬೇದಾರ್ ರಾಮ್ ದಾವಲಜಿ, ಸುಬೇದಾರ್ ಧನರಾಜ್, ಮಾಜಿ ಸೈನಿಕರಾದ ಚಂದ್ರಶೆಖರ ಮಠಪತಿ, ಇರಾರೆಡ್ಡಿ, ಶ್ರೀ ಅಶೊಕ ಪಾಟೀಲ, ಶಿಕ್ಷಕಿ ಶ್ರೀಮತಿ ಸಬಾ,ಶ್ರೀಮತಿ ಪೂಜಾ ಶಿಕ್ಷಕ ವೃಂದ,ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.