ಆಂಗ್ಲ ಭಾಷೆಯ ನಾಟಕ : ಮಕ್ಕಳ ಅಮೋಘ ಅಭಿನಯ
ಸೇಡಂ : ಆ.16:ತಾಲೂಕಿನ ನೀಲಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ನಾಟಕದಲ್ಲಿ ಅಮೋಘ ಅಭಿನಯ ಮಾಡಿದರು.
ಒಂಭತ್ತನೆಯ ತರಗತಿಗೆ ಇಂಗ್ಲಿಷ್ ಭಾಷಾ ಪಠ್ಯವಾಗಿರುವ ಎನ್ ಚಾಟೆಡ್ ಪೂಲ್ ಎಂಬ ನಾಟಕವನ್ನು ಶಾಲೆಯ ನಾಟಕ ಶಿಕ್ಷಕರಾದ ಅಶೋಕ ತೊಟ್ನಳ್ಳಿ ಅವರು, ವಿನ್ಯಾಸ ಗೊಳಿಸಿ, ನಿರ್ದೇಶನ ಮಾಡಿದ್ದಾರೆ.
ಸ್ವಾತಂತ್ರ್ಯ ದಿನೋತ್ಸವಕ್ಕೆಂದೇ ಆಯೋಜಿಸಿದ ವಿಶೇಷ ಪ್ರದರ್ಶನ ವನ್ನು ಕಲಬುರಗಿ ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶರಣು ಜಮಾದಾರ,
ಮುಖ್ಯ ಗುರುಗಳಾದ ಸುರೆಖಾ ವೆಂಕಟರಾವ್, ಶಿಕ್ಷಕರಾದ ಶಿವಾನಂದ ಈಟಿಕರ್, ಶಾರದಾ ಎಮ್, ರೇಣುಕಾ ಕಂಬನೂರ್, ಸುನಿತಾ ದೇವಾಪೂರ್, ಪೂರ್ಣಿಮಾ ಬೆಳಮಗಿ, ಬಿಸಮಿಲ್ಲಾ ವಾಲಿಕಾರ್, ಕವಿತಾ ಗೊಡೇಕರ್ ಹಾಗೂ ಸ್ವರ್ಣಜಯಂತಿ ಕಾರ್ಯಾಲಯದ ಮುಖ್ಯಸ್ಥ ಭಗವಂತರಾವ ಇತರರು ಇದ್ದರು.