ಸಮನ್ವಯ ತತ್ವದ ಮೇರು ಸಾಧಕ ರಾಮಕೃಷ್ಣ ಪರಮಹಂಸ
ಕಲಬುರಗಿ:ಆ.16:ಧರ್ಮಗಳು ಬೇರೆ-ಬೇರೆಯಾದರೂಕೂಡಾ, ಎಲ್ಲಾ ಧರ್ಮಗಳ ಮೂಲತತ್ವಒಂದೇಆಗಿದೆ. ‘ದೇವನೊಬ್ಬ, ನಾಮ ಹಲವು’ ಆಗಿದ್ದು,ಎಲ್ಲಾ ಧರ್ಮಗಳ ತಿರುಳು ಒಂದೇಯಾಗಿದೆ. ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಸೌಹಾರ್ದವಾಗಿ ಬದುಕಬೇಕೆಂಬ ಸಮನ್ವಯತತ್ವವನ್ನು ಪ್ರತಿಪಾದಿಸಿದ ರಾಮಕೃಷ್ಣ ಪರಮಹಂಸ್‍ರ ಸಂದೇಶ ಪಾಲನೆ ಅಗತ್ಯವಾಗಿದೆಎಂದುಉಪನ್ಯಾಸಕ, ಚಿಂತಕಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯಖಾದ್ರಿಚೌಕ್‍ನಲ್ಲಿರುವ ‘ಸಕ್ಸಸ್‍ಕಂಪ್ಯೂಟರತರಬೇತಿಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಜರುಗಿದ’ರಾಮಕೃಷ್ಣ ಪರಮಹಂಸ್‍ರ138ನೇ ಸ್ಮರಣೋತ್ಸವ’ದಲ್ಲಿಅವರುಮಾತನಾಡುತ್ತಿದ್ದರು.
ಭಾರತದಲ್ಲಿಆಂಗ್ಲರ ಪ್ರಭಾವದಿಂದಎಲ್ಲೆಡೆ ಪಾಶ್ಚಾತ್ಯ ಸಂಸ್ಕøತಿತುಂಬಿದ್ದಅಂದಿನ ದಿನಗಳಲ್ಲಿ ಪರಮಂಹಸರು ಭಾರತೀಯ ಸಂಸ್ಕøತಿ, ಧರ್ಮ ಪರಂಪರೆಗಳ ಮಹತ್ವವನ್ನುಎಲ್ಲೆಡೆ ಪ್ರಚಾರ ಮಾಡಿಜನಜಾಗೃತಿಯನ್ನುಂಟು ಮಾಡಿದರು. ಇದರಿಂದ ಸಮಾಜದಎಲ್ಲಾ ವರ್ಗದವರ ಮೇಲೆ ಇವರ ಪ್ರಭಾವ ಬೀರಿತು. ಇವರ ಪ್ರಭಾವಕ್ಕೆ ಒಳಗಾಗಿ ಅಸಂಖ್ಯಾತ ಶಿಷ್ಯಬಳಗವೇ ಸಿದ್ದವಾಯಿತು. ಅದರಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖರಾಗಿದ್ದಾರೆ. ಕಂದಾಚಾರ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಅವರುಯಾವಾಗಲೂ ‘ಆತ್ಮ ಸಾಕ್ಷಾತ್ಕಾರ’ದ ಬಗ್ಗೆ ಉಪದೇಶವನ್ನು ನೀಡುತ್ತಿದ್ದರುಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥಅಸ್ಲಾಂ ಶೇಖ್, ಕಸಾಪ ಉತ್ತರ ವಲಯದಗೌರವಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಕಾಉಜಳಂಬಿ, ಐಶ್ವರ್ಯಬಿರಾದಾರ, ಪೂಜಾಜಮಾದಾರ,ನಿಲೊಫರ್ ಶೇಖ್ ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.