ವೀರಶೈವ ಮಹಾಸಭಾ ಅಂದ್ರದ ಅಧ್ಯಕ್ಷ ದಂಡಿನ ಶಿವಾನಂದರಿಗೆ ಗೌರವ ಸನ್ಮಾನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಆಂದ್ರಪ್ರದೇಶದ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಗರದ ದಂಡಿನ ಶಿವಾನಂದ ಅವರಿಗೆ ನಗರದ ಗಣ್ಯರಿಂದ ಆತ್ಮೀಯ ಗೌರವ ಸನ್ಮಾನ ಮಾಡಲಾಗಿದೆ.
ಕಳೆದ ಬಾರಿಯೂ ಅಧ್ಯಕ್ಷರಾಗಿದ್ದ ಶಿವಾನಂದ ಇವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಮರು ಆಯ್ಕೆ ಮಾಡಿದ್ದಕ್ಕೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಬುಡಾ ಅಧ್ಯಕ್ಷರುಗಳಾದ ಎನ್.ಪ್ರತಾಪ್ ರೆಡ್ಡಿ, ಮುಲ್ಲಂಗಿ ರವೀಂದ್ರಬಾಬು, ಕಾಂಗ್ರೆಸ್ ಮುಖಂಡ ಎಸ್.ಸಿ.ಬ್ರಹ್ಮಯ್ಯ ಮೊದಲಾದವರು ಕಾಸ್ಮೋಪಾಲ್ಟಿನ್ ಕ್ಲಬ್ ನಲ್ಲಿ ಸನ್ಮಾನಿಸಿ ಗೌರವಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲು ಶುಭ ಹಾರೈಸಿದ್ದಾರೆ.