ತೇರು ಬೀದಿಯಲ್ಲಿ ಸ್ವಾತಂತ್ರ್ಯೋತ್ಸವ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ನಗರದ ತೇರು ಬೀದಿಯಲ್ಲಿ ಬಿಜೆಪಿಯ ರಾಜ್ಯ ಓಬಿಸಿ ಕಾರ್ಯಕಾರಣಿ ಸದಸ್ಯ,  ಸವಿತಾ ಸಮಾಜದ ಯಾಳ್ಪಿ ಹೆಚ್.ತಿಪ್ಪಣ್ಣ ನಿನ್ನೆ  ಸ್ವಾತಂತ್ರ್ಯೋತ್ಸವ ಸಮಾರಂಭ ಹಮ್ಮಿಕೊಂಡು ಮಕ್ಕಳಿಗೆ ಶಿಕ್ಷಣ ಕಲಿಕೆಯ ಸಾಮಾಗ್ರಿಗಳನ್ನು ವಿತರಿಸಿದರು.
ಪಾಲಿಕೆಯ ಬಿಜೆಪಿ ಸದಸ್ಯರಾದ ಮೋತ್ಕ‌ರ್ ಶ್ರೀನಿವಾಸ್,  ಹನುಮಂತ ಗುಡಿಗಂಟಿ, ಕೆ.ಹನುಂಮತಪ್ಪ, ಮುಖಂಡರಾದ ವೀರಶೇಖರ ರೆಡ್ಡಿ, ಸೊಂತಗಿರಿ, ಎಸ್.ಮಲ್ಲನಗೌಡ, ಕೆ.ಎಂ. ಗುರುಬಸವ ಸ್ವಾಮಿ, ಕೆ.ಎಂ ಜಗದೀಶಸ್ವಾಮಿ, ಪ್ರಕಾಶ್, ಶಂಕರ್, ಬಿ.ಆರ್. ಪಟೇಲ್, ಜಿ. ತ್ಯಾಗರಾಜ್, ಸೋಡಾ ವೆಂಕಟೇಶ್‌, ವಿಜಯಕುಮಾರ್, ರಮಣ, ಕೆ.ಎಂ. ಶಿವಪ್ರಸಾದ್‌, ತೇಜಸ್‌, ಸವಿತಾ ಸಮಾಜ ತಾಲೂಕ ಅಧ್ಯಕ್ಷ ಆರ್. ಶೇಖಣ್ಣ, ತಿಲಕ್, ರಾಮು, ರಾಮ್, ಗೆರೆರಾಮು, ಹರೀಶ್, ಎಂ.ಎಸ್. ಶಂಕರ್ ಕಮಲೇಶ್ ಕುಮಾರ್, ಊದಿನಕಡ್ಡಿ  ಕಾಜ, ಅಂಜನ ಮೊದಲಾದವರು ಇದ್ದರು.